News

ಕುವೈತ್ ನಲ್ಲಿ ನಡೆದ ಬೆಸ್ಟ್ ಆಫ್ ಇಂಡಿಯಾ ಹೆಲ್ತ್ ಕೇರ್ ಎಕ್ಸ್ ಪೋದಲ್ಲಿ ಯುನಿಟಿ ಆಸ್ಪತ್ರೆ ಭಾಗಿ

ಮಂಗಳೂರು, ಮಾ 19(SM): ಕುವೈತ್ ರಾಡಿಸನ್ ಬ್ಲು ಹೋಟೆಲ್ ಆಯೋಜಿಸಿದ್ದ ಬೆಸ್ಟ್ ಆಫ್ ಇಂಡಿಯನ್ ಹೆಲ್ತ್ ಕೇರ್ ಎಕ್ಸ್ ಪೋ 2019 ಕಾರ್ಯಕ್ರಮದಲ್ಲಿ ಮಂಗಳೂರಿನ ಯುನಿಟಿ ಆಸ್ಪತ್ರೆ ಸಿಬ್ಬಂದಿಗಳು ಭಾಗವಹಿಸಿದ್ದರು. 

ಭಾರತರ ರಾಯಭಾರಿ ನೇತೃತ್ವದಲ್ಲಿ ಇಂಡಿಯನ್ ಡಾಕ್ಟರ್ಸ್ ಫೋರಂ, ಕುವೈತ್ ಮೆಡಿಕಲ್ ಅಸೋಸಿಯೇಶನ್, ಇಂಡಿಯನ್ ಬಿಸಿನೆಸ್ ಆಂಡ್ ಪ್ರೊಫೆಶನಲ್ ಕೌನ್ಸಿಲ್, ಕಾಂನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಸಹಯೋಗದೊಂದಿಗೆ 2 ದಿನದ ಪ್ರದರ್ಶನ ಆಯೋಜಿಸಲಾಗಿತ್ತು.

ಡಾ. ಮುಸ್ತಫಾ ಮುಹಮ್ಮದ್ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿದರು. ಯುನಿಟಿ ಆಸ್ಪತ್ರೆ ನಿರ್ದೇಶಕ ಅಶ್ಪಕ್ ಮೊಹಿದ್ದೀನ್, ಜನರಲ್ ಮ್ಯಾನೇಜರ್ ದೇವರಾಜ್ ಬಿ ಪ್ರತಿನಿಧಿಗಳಾಗಿ ಭಾಗವಹಿಸಿ, ಭಾರತದಲ್ಲಿನ ವೈದ್ಯಶಾಸ್ತ್ರದ ಬಗ್ಗೆ ಪ್ರಬಂಧ ಮಂಡಿಸಿದರು .