News

ಪಚ್ಚನಾಡಿ ಡಂಪ್ ಯಾರ್ಡ್ ನಲ್ಲಿ ಆಕಸ್ಮಿಕ ಬೆಂಕಿ, ಹೊಗೆಯಿಂದ ಸಾರ್ವಜನಿಕರಿಗೆ ತೊಂದರೆ

ಮಂಗಳೂರು, ಜ 23(SM): ನಗರದ ಹೊರವಲಯದ ಪಚ್ಚನಾಡಿ ಡಂಪ್ ಯಾರ್ಡ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿದ ಕ್ಷಣಾರ್ದದಲ್ಲೇ ಯಾರ್ಡ್ ನಲ್ಲಿದ್ದ ಕಸದ ರಾಶಿ ಹೊತ್ತಿ ಉರಿದಿದೆ.

ಕಸದ ರಾಶಿಗೆ ಬೆಂಕಿ ಬೀಳುತ್ತಿದ್ದಂತೆ ಪರಿಸರ ಹೊಗೆಯಿಂದ ಆವೃತಗೊಂಡಿದೆ. ಅಲ್ಲದೆ ಗಬ್ಬು ವಾಸನೆ ಬರಲಾರಂಭಿಸಿದೆ. ಇನ್ನು ಹೊಗೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗಿದೆ.

ವಾಮಂಜೂರು ಪಚ್ಚನಾಡಿ ನಿವಾಸಿಗಳು ಹೊಗೆಯಿಂದಾಗಿ ಮನೆಯಿಂದ ಹೊರಬಂದು ಹಿಡಿಶಾಪ ಹಾಕುತ್ತಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಮಂಗಳೂರು ಗ್ರಾಮಾಂತರ ಠಾಣಾ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.