News

ಕಾಸರಗೋಡು: ಬೈಕ್-ಆಟೋ ರಿಕ್ಷಾ ನಡುವೆ ಅಪಘಾತ-ವಿದ್ಯಾರ್ಥಿ ದಾರುಣ ಸಾವು

ಕಾಸರಗೋಡು, ಜ 23(SM): ಬೈಕ್ ಮತ್ತು ಆಟೋರಿಕ್ಷಾ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಸವಾರ ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ಕಾಸರಗೋಡಿನ ಕೊಳತ್ತೂರು ಐದನೇ ಮೈಲ್ ನಲ್ಲಿ ನಡೆದಿದೆ.

ಮೃತಪಟ್ಟವನನ್ನು ಕುಂಡಂಗುಯಿ ಸರಕಾರಿ ಹಯರ್ ಸೆಕಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಶರತ್ ಎಂದು ಗುರುತಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಉಲ್ಲಾಸ್ ಗಾಯಗೊಂಡಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲೆಗೆ ತೆರಳಲು ಉಲ್ಲಾಸ್ ರ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಶರತ್ ನನ್ನು ಕೂಡಲೇ ಕಾಸರಗೋಡು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.