News

ಉಡುಪಿ: ಇಸ್ರೋಗೆ ಮಾಹಿತಿಯೇ ಇಲ್ಲ - ಯಶಪಾಲ್ ಸುವರ್ಣ ಆಕ್ರೋಶ

ಉಡುಪಿ, ಜ 13(MSP): ರಾಜ್ಯ ಸರ್ಕಾರ ಮೀನುಗಾರರ ಬೋಟ್ ಪತ್ತೆಗಾಗಿ ಇಸ್ರೋ (ಭಾರತೀಯ ಬಾಹ್ಯಕಾಶ ಸಂಶೋಧನಾ ಕೇಂದ್ರ) ಸಹಕಾರ ಕೇಳಿದ್ದೇವೆ ಎಂದು ಭರವಸೆ ನೀಡಿತ್ತು. ಆದರೆ ಸಹಾಯಕೋರಿ ಇಸ್ರೋಗೆ ಈವರೆಗೆ ಪತ್ರ ಬರೆಯಲಿಲ್ಲ ಎಂದು ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ಉದಾಸೀನತೆ ಎದ್ದು ಕಾಣಿಸುತ್ತಿದೆ.

ಮೀನುಗಾರರು ನಾಪತ್ತೆಯಾಗಿ ಒಂದು ತಿಂಗಳು ಕಳೆಯುತ್ತ ಬಂದಿದ್ದೆ, ಎಲ್ಲಾ ಮೀನುಗಾರರು ಆತಂಕದಲ್ಲಿದ್ದೇವೆ, ಆದರೆ ರಾಜ್ಯ ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾಪತ್ತೆಯಾದ ಮೀನುಗಾರರ ಪತ್ತೆಗಾಗಿ ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಮೀನುಗಾರಿಕೆ ಸಚಿವರು ಇಸ್ರೋ ನೆರವು ಪಡೆಯಲಾಗುವುದು ಎಂದು ತಿಳಿಸಿದ್ದರು.