News

ಮಲ್ಪೆ: ಮೀನುಗಾರರ ಪತ್ತೆಗೆ ಮಾಲ್ತಿ ದೇವಿಗೆ ವಿಶೇಷ ಪೂಜೆ

ಮಲ್ಪೆ, ಜ 13(MSP): ಮಲ್ಪೆಯ ಮೀನುಗಾರರು ನಾಪತ್ತೆಯಾಗಿ ಒಂದು ತಿಂಗಳು ಹತ್ತಿರವಾದರೂ ಇದರ ಬಗ್ಗೆ ಸುಳುವು ಸಿಗದ ಹಿನ್ನೆಲೆಯಲ್ಲಿ ಮೀನುಗಾರ ಶಕ್ತಿ ದೇವತೆ ಮಾಲ್ತಿದೇವಿಗೆ ಶನಿವಾರ ಪೂಜೆ ಸಲ್ಲಿಸಲಾಯಿತು. 

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಏಳುಮಂದಿ ಮೀನುಗಾರರ ಸಹಿತ ಸುವರ್ಣ ತ್ರಿಭುಜ ಹೆಸರಿನ ಬೋಟ್ ನಾಪತ್ತೆ ಯಾಗಿ 28 ದಿನಕಳೆದಿದೆ. ಎಲ್ಲಾ ರೀತಿಯಲ್ಲೂ ಹುಡುಕಾಟ ನಡೆಸಿದ್ರು ಮೀನುಗಾರರ ಸುಳಿವೇ ಇಲ್ಲ. ಈಗಾಗಲೇ ಕೊಸ್ಟ್ ಗಾರ್ಡ್ ಮತ್ತು ನೇವಿಯ ಸಹಾಯದಿಂದ ಹುಡುಕಾಟ ನಡೆಸಲಾಗಿದ್ದು ಫಲಿತಾಂಶ ಮಾತ್ರ ಶೂನ್ಯ.ಇನ್ನೊಂದೆಡೆ ಪೊಲೀಸ್ ಇಲಾಖೆ ಕೂಡ ಎರಡು ತಂಡಗಳನ್ನು ಕೇರಳಕ್ಕೆ ಕಳುಹಿಸಿದೆ. ಮಹಾರಾಷ್ಡ್ರದ ಕಡಲತೀರದಲ್ಲೂ ಹುಡುಕಾಟ ಮುಂದುವರಿದಿದೆ.ಆದ್ರೂ ಮೀನುಗಾರರ ಬಗ್ಗೆ ಮಹತ್ವದ ಸುಳಿವು ದೊರೆತಿಲ್ಲ. ವೈಜ್ಞಾನಿಕವಾಗಿ ಪೊಲೀಸ್ ಕಾರ್ಯಾಚರಣೆ ನಡೆಯುತ್ತಿದ್ದರೆ ಧಾರ್ಮಿಕ ಪ್ರಯತ್ನಗಳನ್ನು ಮೀನುಗಾರರು ಮುಂದುವರಿಸಿದ್ದಾರೆ. ತಮ್ಮವರ ಪತ್ತೆಗಾಗಿ ಪದೇ ಪದೇ ದೇವರ ಮೊರೆ ಹೋಗುತ್ತಿದ್ದಾರೆ. ಮಲ್ಪೆ ಸಮುದ್ರದ ನಡುವೆ ಇರುವ ಮೀನುಗಾರ ಸಮುದಾಯದ ಆರಾಧ್ಯ ದೇವಿಗೆ ಶರಣಾಗಿದ್ದಾರೆ. ಮಾಲ್ತಿದೇವಿಗೆ ವಿಶೇಷ ಪೂಜೆ ಸಲ್ಲಿಸಿ ದ್ದಾರೆ. ಮಾಲ್ತಿ ದ್ವೀಪದಲ್ಲಿ ಇರುವ ಪ್ರಾಕೃತಿಕ ವಾದ ದೇವಿಯ ಗುಡಿಯ ಬಳಿ ತಮ್ಮ ಪದ್ಧತಿ ಯಂತೆ ಪೂಜೆ ನೆರವೇರಿಸಿದ್ದಾರೆ. ಕಾಣೆಯಾದ ಮೀನುಗಾರರ ಸಹಿತ ಬೋಟ್ ಪತ್ತೆಯಾಗುವಂತೆ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ‌.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಿಶ್ ಮಾರ್ಕೆಟಿಂಗ್ ಪೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾಧ್ಯಮ ಕ್ಕೆ ಪ್ರತಿಕ್ರಿಯಿಸಿ, ' ರಾಜ್ಯ ಸರ್ಕಾರ ನಾಪತ್ತೆ ಯಾದ ಬೋಟ್ ನ ತನಿಖಾ ವಿಚಾರವನ್ನು ಡೈವರ್ಟ್ ಮಾಡಲಾಗಿದೆ ‌ಎಂದು ಆರೋಪಿಸಿದರು. ಇಸ್ರೋದ ಅಧ್ಯಕ್ಷ ರು ಪ್ರಕಟಿಸಿದ ಪ್ರಕಟನೆಯಂತೆ ಕಾರ್ಯ ಪ್ರವೃತ್ತಾ ರಾಗುವಲ್ಲಿ ಸರ್ಕಾರ ವಿಫಲವಾಗಿದೆ. ಶೋಧ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದೆ.

ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಮಂದಿ ಮೀನುಗಾರರು ಸುರಕ್ಷಿತವಾಗಿ ವಾಪಾಸಾಗಲು ಪ್ರತಿದಿನ ಪೂಜೆ ಸಲ್ಲಿಸಲಾಗುತ್ತಿದೆ. ದೇವರು ನಮ್ಮ ಪ್ರಾರ್ಥನೆಗೆ ಕಿವಿಗೊಡುತ್ತಾನೆ ಎನ್ನುವ ನಂಬಿಕೆ ಇದೆ.

ಶೋಧ ಕಾರ್ಯ ದಲ್ಲಿ ಸಿಕ್ಕ ಸುಳಿವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಪ್ರಚಾರ ಪಡೆದು ಕೊಳ್ಳುವುದಕ್ಕಿಂತ ಆ ನಿಟ್ಟಿನಲ್ಲಿ ಪತ್ತೆ ಹಚ್ಚುವ ಕಾರ್ಯ ದಲ್ಲಿ ಇನ್ನಷ್ಟು ಬೆಂಬಲ ನೀಡಬೇಕೆಂದು ಸರಕಾರವನ್ನು ಆಗ್ರಹಿಸಿದರು.