News

ನದಿಗೆ ಉರುಳಿ ಬಿದ್ದ ಬೊಲೆರೋ-ಮಹಿಳೆ ದಾರುಣ ಸಾವು

ಮೂಲ್ಕಿ, ಜ 12(SM): ಮೂಲ್ಕಿ ಠಾಣಾ ವ್ಯಾಪ್ತಿಯ ಸಂಕಲಕರಿಯ ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬೊಲೆರೋ ವಾಹನವೊಂದು ನದಿಗೆ ಬಿದ್ದು ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರದ ಬೋಳ ನಿವಾಸಿ ಡಯಾನಾ(45) ಮೃತ ಮಹಿಳೆ.

ಕಾರ್ಕಳ ತಾಲೂಕಿನ ಸಂಕಲಕರಿಯ ಎಂಬಲ್ಲಿ ಬೊಲೆರೋ ಸಂಚಾರಿಸುತ್ತಿದ್ದಾಗ ವಾಹನ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಹಾಗೂ ಹೆದ್ದಾರಿಯಿಂದ ಪಕ್ಕಕ್ಕೆ ಸರಿದು ಶಾಂಭವಿ ನದಿಗೆ ಉರುಳಿ ಬಿದ್ದಿದೆ.

ವಾಹನ ಸಂಪೂರ್ಣ ನದಿ ನೀರಿನಲ್ಲಿ ಮುಳುಗಿದ ಕಾರಣ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. ಹಾಗೂ ಬೊಲೆರೋದಲ್ಲಿದ್ದ ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸೇರಿಕೊಂಡು ವಾಹನವನ್ನು ಮೇಲಕ್ಕೆತ್ತಿದ್ದಾರೆ.

ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.