News

ಕುಂದಾಪುರ: 21 ಜಿಂಕೆ ಕೊಂಬು ವಶ- ಬೃಹತ್ ಜಾಲ ಭೇದಿಸಿದ ಅರಣ್ಯ ಇಲಾಖೆ

ಕುಂದಾಪುರ, ಜ 11(MSP): ಆಮ್ನಿ ಕಾರಿನಲ್ಲಿ ಸುಮಾರು 21 ಜಿಂಕೆ ಕೊಂಬುಗಳನ್ನು ಸಾಗಿಸುತ್ತಿದ್ದ ಐವರನ್ನು ಕುಂದಾಪುರದ ಅರಣ್ಯಾಧಿಕರಗಳ ತಂಡ ಕೋಟೇಶ್ವರದ ಬೈಪಾಸ್‌ ಬಳಿ ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಗುರುವಾರ ಮಿಂಚಿನ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕೋಟೇಶ್ವರ ಬೈಪಾಸ್ ಬಳಿ ವಾಹನ ಸಹಿತ 21 ಜಿಂಕೆ ಕೊಂಬು ವಶ ವಶಪಡಿಸಿಕೊಂಡಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಹೆಂಗವಳ್ಳಿಯ ಗ್ರಾಮ ಬಾಳೆಹಿತ್ಲು ರವಿ (35), ಕುಂದಾಪುರದ ಕುಂದೇಶ್ವರ ದೇವಸ್ಥಾನದ ಬಳಿ ನಿವಾಸಿ ದಿನೇಶ ಗಾಣಿಗ (54), ಅಲ್ಬಾಡಿಯ ತೂಣದೆಮೆಯ ದೀಪಕ್‌ (32), ಅಲ್ಬಾಡಿಯ ಬುಕ್ಕಿಗುಡ್ಡೆಮನೆ ಉದಯ ನಾಯ್ಕ (34),ಅಲ್ಬಾಡಿಯ ಗುಡ್ಡೆಮನೆಯ ರವಿಚಂದ್ರ ಶೆಟ್ಟಿ (32) ಅವರನ್ನು ವಶಕ್ಕೆ ಪಡೆದಿದ್ದಾರೆ.

ಹಾಲಾಡಿ ಕಡೆಯಿಂದ ಜಿಂಕೆ ಕೊಂಬು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಕೆ ಕೊಟೇಶ್ವರ ಬೈಪಾಸ್ ನಲ್ಲಿ ವಾಹನವನು ಅಡ್ಡಗಟ್ಟಿದೆ. ಈ ಸಂದರ್ಭ ಆರೋಪಿಗಳು ವಾಹನದಿಂದ ಇಳಿಸು ಪರಾರಿಯಾಗಲು ಯತ್ನಿಸಿದ್ದಾರೆ.ಆದರೆ ವಾಹನವನ್ನು ಸುತ್ತುವರಿದ ಇಲಾಖೆ ಅಧಿಕಾರಿಗಳು ಎಲ್ಲಾ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು ಲಕ್ಷಾಂತರ ರೂ. ಮೌಲ್ಯದ 21 ಜಿಂಕೆ ಕೊಂಬು ಹಾಗೂ ಸಾಗಾಟಕ್ಕೆ ಬಳಸಿದ ಆಮ್ನಿ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಕುಂದಾಪುರ ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್‌ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.