News

ಉಡುಪಿ: ಹಿಂದೂ ನಾಯಕರ ಮೈಮುಟ್ಟುವ ದುಸ್ಸಾಹಸ ಮಾಡಬೇಡಿ- ಯಶ್ ಪಾಲ್ ಸುವರ್ಣ

ಉಡುಪಿ, ಜ. 11(MSP): ಹಿಂದೂ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್, ಶರಣ್ ಪಂಪ್‌ವೆಲ್ ಮತ್ತು ಜಗದೀಶ್ ಶೇಣವ ಅವರ ಹತ್ಯೆಗೆ ಸಂಚು ರೂಪಿಸಿರುವ ವಿಷಯ ಅತಂಕಕಾರಿ. ರಾಜ್ಯ ಸರ್ಕಾರ ಹಿಂದೂ ನಾಯಕರಿಗೆ ಭದ್ರತೆ ಒದಗಿಸಬೇಕು ಎಂದು ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ರಾಷ್ಟ್ರೀಯ ವಾದಿ, ಹಿಂದೂಪರ ಸಂಘಟನೆಗಳ ದಮನಕ್ಕೆ ವಿದೇಶಿ ಶಕ್ತಿಗಳ ಜೊತೆಗೆ ಕೆಲವು ಸಮಾಜಘಾತುಕರು ಕೈ ಜೋಡಿಸಿದ್ದು ಅವರನ್ನು ಎದುರಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ ಎಂದು ಎಚ್ಚರಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಕಾರಣ ನಿರ್ದಿಷ್ಟ ಸಮುದಾಯವೊಂದರ ಮತ ಕ್ರೋಡೀಕರಣಕ್ಕೆ ಮುಂದಾಗಿದೆ.ಈ ಹಿಂದೆಯೂ ಹಲವಾರು ಬಾರಿ ಚುನಾವಣೆಯ ಸಮಯದಲ್ಲಿ ಹಿಂದೂ ಮುಖಂಡರ ಹತ್ಯೆ ಯತ್ನ ನಡೆಸಿ ಕೋಮುಗಲಭೆ ಎಬ್ಬಿಸುವ ಹುನ್ನಾರ ನಡೆದಿತ್ತು. ಸಮಾಜದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವವರನ್ನು ಸರ್ಕಾರ ಮಟ್ಟ ಹಾಕಬೇಕು ಎಂದು ಯಶಪಾಲ್ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ತುಷ್ಟೀಕರಣ ನೀತಿಯನ್ನು ಪಕ್ಕಕ್ಕಿಟ್ಟು ಮತೀಯವಾದಿ ಶಕ್ತಿಗಳನ್ನು ಕಠಿಣ ಕ್ರಮದ ಮೂಲಕ ಹತ್ತಿಕ್ಕಬೇಕು ಎಂದು ಅವರು ಹೇಳಿದ್ದಾರೆ.