News

ಬೆಳ್ತಂಗಡಿ: ಅಪಘಾತದಲ್ಲಿ ಬೈಕ್ ಸವಾರ ದಾರುಣ ಸಾವು

ಬೆಳ್ತಂಗಡಿ, ಜ 10(SM): ಬೈಕ್ ಅಪಘಾತವೊಂದರಲ್ಲಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಅಳದಂಗಡಿಯಲ್ಲಿ ನಡೆದಿದೆ. ಮೃತ ಯುವಕನನ್ನು ಕಾರ್ಕಳ ಈದು ಪೆರ್ನೋಡಿ ನಿವಾಸಿ ರಾಧಾಕೃಷ್ಣ ಭಟ್ ಅವರ ಪುತ್ರ ಅಭಿಷೇಕ್(19) ಎಂದು ಗುರುತಿಸಲಾಗಿದೆ.

ಎಲೆಕ್ಟ್ರಿಶಿಯನ್ ವೃತ್ತಿ ಮಾಡುತ್ತಿರುವ ಇವರು ಗುರುವಾಯನಕೆರೆ ಕಡೆಯಿಂದ ಅಳದಂಗಡಿಗೆ ಬರುತ್ತಿದ್ದಾಗ ಅಳದಂಗಡಿ ಸರಕಾರಿ ಶಾಲೆಯ ಬಳಿಯ ತಿರುವಿನಲ್ಲಿ ಬೈಕ್‌ನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿತು ಎನ್ನಲಾಗಿದೆ.

ತಲೆಯ ಭಾಗಕ್ಕೆ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ರಾಧಾಕೃಷ್ಣ ಭಟ್ ಅವರಿಗೆ ಓರ್ವನೇ ಪುತ್ರ.

ರಾಧಾಕೃಷ್ಣ ಭಟ್ ಅವರು ಹೊಸ್ಮಾರಿನ ಹೊಟೇಲ್ ಒಂದರಲ್ಲಿ ದುಡಿಯುತ್ತಿದ್ದು, ತಾಯಿ ಮನೆಕೆಲಸ ನೋಡಿಕೊಳ್ಳುತ್ತಿದ್ದಾರೆ.

ಘಟನೆಯ ಬಗ್ಗೆ ವೇಣೂರು ಪೋಲಿಸರು ಪ್ರಕರಣ ದಾಖಲಾಗಿದೆ.