News

'ಪಾಕ್ 'ನಲ್ಲೂ ಕೆಜಿಎಫ್ ಹವಾ ಶುರು - ಕನ್ನಡದ ಪ್ರಥಮ ಸಿನಿಮಾ..!

ಬೆಂಗಳೂರು, ಜ 10 (MSP):ದೇಶಾದ್ಯಂತ ಹವಾ ಕ್ರೀಯೆಟ್ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಇದೀಗ ಪಾಕಿಸ್ತಾನದಲ್ಲೂ ತೆರೆಕಾಣಲು ರೆಡಿಯಾಗಿದೆ. ಆ ಮೂಲಕ ಪಾಕಿಸ್ತಾನದಲ್ಲಿ ತೆರೆ ಕಂಡ ಸ್ಯಾಂಡಲ್ ವುಡ್ ಪ್ರಥಮ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಪಾಕಿಸ್ತಾನದಲ್ಲಿ ಕೆಜಿಎಫ್ ಸಿನಿಮಾದ ಟಿಕೆಟ್​ ಬುಕ್ಕಿಂಗ್​ ಪ್ರಾರಂಭವಾಗಿದ್ದು, ಇಸ್ಲಾಮಾಬಾದ್ ಕ್ಲಬ್ ಟಿಕೆಟ್ ಬುಕ್ಕಿಂಗ್ ಸೈಟ್ ನಲ್ಲಿ ಗುರುವಾರದಿಂದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ.

ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ದೇಶ ಹಾಗೂ ಹೊರ ದೇಶದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಸುದ್ದಿ ಮಾಡಿತ್ತು. ಅಷ್ಟೇ ಅಲ್ಲದೇ ಕನ್ನಡ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

ಕನ್ನಡ ನಟರೊಬ್ಬರ ಸಿನಿಮಾ ಪಾಕಿಸ್ತಾನದಲ್ಲಿ ತೆರೆ ಕಾಣುತ್ತಿರುವುದು ಇದೇ ಪ್ರಥಮವಾಗಿದ್ದು, ಕೆಜಿಎಫ್ ಸಿನಿಮಾ ಬಿಡುಗಡೆಗೂ ಮುಂಚೆಯೇ ಪಾಕಿಸ್ತಾನದಲ್ಲಿ ಸಿನಿಮಾ ಬಿಡುಗಡೆಗೆ ಒತ್ತಡ ಕೇಳಿಬಂದಿತ್ತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೈಲರ್‌ ನೋಡಿ ಬೆರಗಗಿದ್ದ ಅಲ್ಲಿನ ಜನ ಕೆಜಿಎಫ್‌ ರಿಲೀಸ್ ಗಾಗಿ ಕಾಯುತ್ತಿದ್ದರು.