News

ಮಂಗಳೂರು: ಮಹಿಳೆಯ ಎಟಿಎಂ ಕಾರ್ಡ್‌ ಕದ್ದು ನಗದು ಡ್ರಾ

ಮಂಗಳೂರು,ಜ 10 (MSP): ಜ್ಯೋತಿ ಜಂಕ್ಷನ್‌ನಿಂದ ಕೊಡಿಯಾಲ್‌ಬೈಲಿಗೆ ಜ. 8 ರಂದು ಬೆಳಗ್ಗೆ ಖಾಸಗಿ ಸರ್ವಿಸ್‌ ಬಸ್‌ನಲ್ಲಿ ಸಂಚರಿಸುತ್ತಿದ್ದ ಜ್ಯೋತಿ ಅವರ ಬ್ಯಾಗಿನಿಂದ 2 ಎಟಿಎಂ ಕಾರ್ಡ್‌ಗಳು ಹಾಗೂ 7, 500 ರೂ. ಕಳವು ಮಾಡಲಾಗಿದೆ.

ಈ ಎಟಿಎಂ ಕಾರ್ಡ್‌ ಬಳಸಿ ಮಲ್ಲಿಕಟ್ಟೆಯ ಎಸ್‌ಬಿಐ ಎಟಿಎಂ 25,000 ರೂ. ಡ್ರಾ ಮಾಡಲಾಗಿದೆ. ಜ್ಯೋತಿ ಅವರು ಇನ್ಯೂರೆನ್ಸ್‌ ಕಂಪೆನಿಯಲ್ಲಿ ಕ್ಲರ್ಕ್‌ ಆಗಿದ್ದು, ಎಂದಿನಂತೆ ಸರ್ವಿಸ್‌ ಬಸ್ಸಿನಲ್ಲಿ ಸಂಚರಿಸುತ್ತಿದ್ದಾಗ ಅವರ ಬ್ಯಾಗ್‌ನ ಝಿಪ್‌ ತೆರೆದು ಕಳವು ಮಾಡಲಾಗಿತ್ತು.

ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.