News

ಮಂಗಳೂರು: ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ್ಯು

ಮಂಗಳೂರು, ಜ 09(SM): ನಗರದ ಹೊರವಲಯ ಪಡೀಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವ ಛಾಯಾಗ್ರಾಹಕರೊಬ್ಬರು ಮೃತಪಟ್ಟಿದ್ದಾರೆ. ಯೆಯ್ಯಾಡಿ ನಿವಾಸಿ ಗಣೇಶ್ ಮೃತ ಛಾಯಾಗ್ರಾಹಕ.

ವಿವಾಹ ಸಮಾರಂಭದ ಚಿತ್ರೀಕರಣ ಮುಗಿಸಿ ಮಂಗಳೂರಿಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸ್ನೇಹಿತ ವೀಡಿಯೋಗ್ರಾಫರ್ ಸಂದೇಶ್ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಗಣೇಶ್ ಹಿಂಬದಿ ಸವಾರರಾಗಿದ್ದರು. ಪಡೀಲ್ ಬಳಿ ಹಿಂಬದಿಯಿಂದ ಓವರ್‌ಟೇಕ್ ಮಾಡಿಕೊಂಡು ಬಂದ ಕಂಟೈನರ್ ಲಾರಿ ಸ್ಕೂಟರ್‌ಗೆ ತಾಗಿದ್ದು ಈ ವೇಳೆ ನಿಯಂತ್ರಣ ಕಳೆದುಕೊಂಡು ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.

ಘಟನೆಯಲ್ಲಿ ಗಣೇಶ್ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.