News

ಮೀನುಗಾರಿಕಾ ಸಚಿವರನ್ನು ತರಾಟೆಗೆತ್ತಿಕೊಂಡ ಮೊಗವೀರರು

ಉಡುಪಿ, ಜ 09(SM): ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಕಣ್ಮೆರೆಯಾದ ಇಬ್ಬರ ಮನೆಗೆ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಭೇಟಿಕೊಟ್ಟು ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭ ಕುಟುಂಬಸ್ಥರು ಮತ್ತು ಮೀನುಗಾರರು ಸಚಿವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಇಷ್ಟು ದಿನ ನೀವು ಎಲ್ಲಿ ಹೋಗಿದ್ದಿರಿ? ಈಗ ಯಾಕೆ ನಮ್ಮ ಮನೆಗೆ ಬಂದಿದ್ದೀರಿ? ಎಂದು ಸಚಿವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರೂ ಕುಟುಂಬಸ್ಥರು ಸಚಿವರ ವಿರುದ್ಧ ಧ್ವನಿ ಎತ್ತಿದರು.

ಈ ವೇಳೆ ಮಾತನಾಡಿದ ಸಚಿವರು ಮೊಗವೀರ ಸಮುದಾಯ ದೇವರ ಮೊರೆ ಹೋಗಿದ್ದು ಗಮನಕ್ಕೆ ಬಂದಿದೆ. ದೈವದ ನುಡಿಯ ಪ್ರಕಾರ ಉತ್ತರ ಭಾಗದಲ್ಲೂ ಹುಡುಕಾಟ ನಡೆಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು. ಸರ್ಕಾರ ಮೀನುಗಾರರನ್ನು ಕಡೆಗಣನೆ ಮಾಡಿಲ್ಲ. ಡಿಸಿ ಎಸ್ಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.