News

ಮಂಗಳೂರು: ಹಸಿವಿನಿಂದ ಬಂದ‌ ಕಂದಮ್ಮಗಳಿಗೆ ನೆರವು ನೀಡಿ ಮಾನವೀಯತೆ ಮೆರೆದ ಪೊಲೀಸ್ ಪೇದೆ

ಮಂಗಳೂರು, ಜ09(SS): ನಗರದಲ್ಲಿ ಭಾರತ್ ಬಂದ್  ದಿನ‌‌‌   ಹಸಿವಿನಿಂದ‌ ದಾನ ಕೇಳಿ ಬರುತ್ತಿದ್ದ ಇಬ್ಬರು ಪುಟ್ಟ ಕಂದಮ್ಮಗಳಿಗೆ ಪೊಲೀಸ್ ಪೇದೆಯೊಬ್ಬರು ನೆರವಿನ‌ ಹಸ್ತ ಚಾಚಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
 

ಶಿವಪ್ರಸಾದ್ ಬಳ್ಳಾರಿ ಪುಟಾಣಿಗಳಿಗೆ ನೆರವಾಗಿ ಮಾನವೀಯತೆ ಮೆರೆದ ಮಂಗಳೂರಿನ ಪೊಲೀಸ್ ಪೇದೆ. ಸಿಟಿ ಬಸ್ ನಿಲ್ದಾಣದಲ್ಲಿ ಪುಟಾಣಿ‌ ಮಕ್ಕಳು ಪೊಲೀಸ್ ಪೇದೆ ಬಳಿ‌ ಹಸಿವು ಎಂದು ದಾನ‌‌ ಕೇಳಿದ್ದು, ಪೇದೆ ತಕ್ಷಣ ಮಕ್ಕಳ ನೋವಿಗೆ ಸ್ಪಂದಿಸಿದ್ದಾರೆ. ಈ ವೇಳೆ ಮಕ್ಕಳು ಸಂತಸದಿಂದ ‌ ಪೊಲೀಸ್ ಪೇದೆ ಶಿವಪ್ರಸಾದ್ ಬಳ್ಳಾರಿ ಅವರಿಗೆ  ಕೃತಜ್ಞತೆ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಮಾತ್ರವಲ್ಲ, ಪೊಲೀಸ್ ಪೇದೆ ಶಿವಪ್ರಸಾದ್ ಬಳ್ಳಾರಿ ಅವರ ಮಾನವೀಯತೆಯ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ಕೂಡ ವ್ಯಕ್ತವಾಗಿದೆ.