News

ಉಡುಪಿ: ಸಿನಿಮಾ ಇಂಟರ್ವೆಲ್ ನಲ್ಲಿ ನಾಪತ್ತೆಯಾದಾಕೆ ಪ್ರಿಯಕರನೊಂದಿಗೆ ಗೋವಾದಲ್ಲಿ ಪತ್ತೆ

ಉಡುಪಿ,ಜ 09 (MSP):  ಮಣಿಪಾಲದ ಐನಾಕ್ಸ್ ಚಿತಮಂದಿರಕ್ಕೆ ಶುಕ್ರವಾರ ಸಾಯಂಕಾಲ ಪತಿ ಜತೆ ಸಿನಿಮಾ ವಿಕ್ಷಣೆಗೆ ತೆರಳಿದ್ದ ಸಂದರ್ಭ ಇಂಟರ್ವೆಲ್ ಬಳಿಕ ನಾಪತ್ತೆಯಾಗಿದ್ದ ನವ ವಿವಾಹಿತೆ ಜೆನ್.ಡಿ ಕ್ರೂಸ್ ಗೋವಾದಲ್ಲಿ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ.

ಜೆನ್ ಅವರ ಮೊಬೈಲ್ ಲೊಕೇಶನ್ ಗೋವಾದಲ್ಲಿ ಪತ್ತೆಯಾದ ಕಾರಣ ಸೋಮವಾರ ಮಣಿಪಾಲ ಪೊಲೀಸರ ತಂಡ ಗೋವಾಕ್ಕೆ ತೆರಳಿ ತನಿಖೆ ನಡೆಸಿತ್ತು.ಜೆನ್ ಅವರನ್ನು ಪ್ರಿಯಕರ ಪಶ್ಚಿಮ ಬಂಗಾಳದ ನಿವಾಸಿ ತನ್ಮಯ್ ನಾಥ್ (೨೫ ಎಂಬಾತನೊಂದಿಗೆ ಗೋವಾ ಪಣಜಿಯ ಐಲ್ಯಾಂಡ್ ಒಂದರಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮಾ ಇಂಟರ್ವೆಲ್ ನಲ್ಲಿ ವಾಷ್ ರೂಂ ಗೆ ಹೋಗಿ ಬರುತ್ತೇನೆ ಎಂದು ಹೇಳಿ ತೆರಳಿದ ಜೆನ್.ಡಿ ಕ್ರೂಸ್ ಬಳಿಕ ನಾಪತ್ತೆಯಾಗಿದ್ದರು. ಅಂದು ಸಾಯಂಕಾಲ ಅವರು ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ತೆರಳಿ ಎಟಿಂ ನಲ್ಲಿ ೩೦ ಸಾವಿರ ರೂ. ಹಣ ತೆಗೆದುಕೊಂಡು ರೈಲಿನಲ್ಲಿ ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು.

ಜೆನ್ ಪ್ರಿಯಕರ ತನ್ಮಯನಾಥ್ ಧಾರವಾಹಿಗಳ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಿದ್ದು ಐದು ವರ್ಷದ ಹಿಂದೆ ಮಂಗಳೂರಿನಲ್ಲಿ ಜೆನ್ ಗೆ ಪರಿಚಯವಾಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರಿಗೆ ಹೆದರಿ ಪ್ರೀತಿ ವಿಚಾರ ಮುಚ್ಚಿಟ್ಟಿದ್ದರು ಎನ್ನಲಾಗಿದೆ.

ಜೆನ್ ಮೂಲತಃ ಮೂಡುಬಿದಿರೆ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಇವರು ಕಟಪಾಡಿ ನಿವಾಸಿ ಲಾಯ್ಡ್ ಮೊಂತೆರೋ ಅವರನ್ನು ಡಿ.೩೧ ರಂದು ವಿವಾಹವಾಗಿದ್ದರು. ಇದೀಗ ಪೊಲೀಸರು ಪ್ರೇಮಿಗಳನ್ನು ಪತ್ತೆ ಮಾಡಿ ಮಣಿಪಾಲ ಠಾಣೆಗೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.