News

ಮಲ್ಪೆ: ಮೀನುಗಾರ ಪತ್ತೆಗೆ ಇಸ್ರೋ ಸಹಕಾರ ಕೋರಿಕೆ

ಮಲ್ಪೆ, ಜ 09 (MSP):ನಾಪತ್ತೆಯಾಗಿರುವ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಮತ್ತು ಏಳು ಮಂದಿ ಮೀನುಗಾರರ ಪತ್ತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ( ಇಸ್ರೋ) ಸಹಕಾರವನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ. ಇಸ್ರೋ ಮತ್ತು ಹೈದರಬಾದ್ ನ ಇಂಡಿಯನ್ ನ್ಯಾಷನಲ್ ಸೆಂಟರ್ ಆಫ್ ಓಶಿಯನ್ ಇನ್ಫಾರ್ಮೇಶನ್ ಸಿಸ್ಟಮ್ , ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಆಪ್ಲಿಕೇಶನ್ ಸೆಂಟರ್ ಗೆ ಮಾಹಿತಿ ರವಾನೆ ಮಾಡಲಾಗಿದೆ ಎಂದು ಎಸ್.ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಮಲ್ಪೆ ಬಂದರಿನಿಂದ ಡಿ.13ರಂದು ರಾತ್ರಿ 11 ಗಂಟೆಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ 15ರಂದು ಮಧ್ಯರಾತ್ರಿ ಏಕಾಏಕಿ ನಾಪತ್ತೆಯಾಗಿತ್ತು. ರಾತ್ರಿ 1 ಗಂಟೆವರೆಗೆ ಸಂಪರ್ಕದಲ್ಲಿದ್ದವರು ಮೀನುಗಾರರು ಬಳಿಕ ಕಾಣೆಯಾಗಿದ್ದರು. ಬೋಟ್ ಸಮೇತ ನಾಪತ್ತೆಯಾಗಿರುವ ಮೀನುಗಾರರ ಸುಳಿವು 27 ದಿನ ಕಳೆದರೂ ಪತ್ತೆಯಾಗಿಲ್ಲ.