News

ಧಾರ್ಮಿಕ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶ ದೇಶಕ್ಕೆ ಮಾರಕ-ಶಕುಂತಳಾ ಶೆಟ್ಟಿ

ಪುತ್ತೂರು, ಜ 08(SM): ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ದೇಶಕ್ಕೆ ಮಾರಕ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು ಕೇರಳದ ಶಬರಿಮಲೆಯಲ್ಲಿ ಅದರದೇ ಆದ ಕಟ್ಟುಪಾಡುಗಳಿದ್ದು, ಅದರಲ್ಲಿ ಮಹಿಳಾ ಸಮಾನತೆಯ ವಿಚಾರವೇ ಬರುವುದಿಲ್ಲ ಎಂದರು.

ಶಬರಿಮಲೆಗೆ ಅಲ್ಲಿಯದ್ದೇ ಆದಂತಹ ವಿಶೇಷತೆಗಳಿದ್ದು, ಹಿಂದಿನಿಂದಲೂ ಕ್ಷೇತ್ರಕ್ಕೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ನಿಷೇಧವಿದೆ. ಶಬರಿಮಲೆ ಕ್ಷೇತ್ರಕ್ಕೆ 48 ಕಿಲೋ ಮೀಟರ್ ನಡೆದು ಹೋಗಬೇಕಾದ ಪರಿಸ್ಥಿತಿಯಿದ್ದು, ಅತ್ಯಂತ ಕ್ಲಿಷ್ಟಕರವಾದ ಹಾದಿಯಲ್ಲಿ ಮಹಿಳೆಯರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿ ನಿಷೇಧವಿರುವ ಸಾಧ್ಯತೆಯಿದೆ.

ಅಲ್ಲದೆ ದೇಹ ಸಂಬಂಧಿ ಸಮಸ್ಯೆಯಿಂದಲೂ ಮಹಿಳೆಯರಿಗೆ ಶಬರಿಮಲೆಗೆ ನಿಷೇಧವಿದೆ. ಕ್ಷೇತ್ರದಲ್ಲಿ ಯಾವುದಕ್ಕೆ ಅವಕಾಶ ನೀಡಬೇಕು. ನೀಡಬಾರದು ಎನ್ನುವ ವಿಚಾರ ದೇವಸ್ಥಾನದ ಅರ್ಚಕರು ಹಾಗೂ ಅದಕ್ಕೆ ಸಂಬಂಧಪಟ್ಟವರ ವಿವೇಚನೆಗೆ ಬೀಡಬೇಕಾಗಿರುವ ವಿಚಾರ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದ ಅವರು ಈ ಬೆಳವಣಿಗೆ ದೇಶಕ್ಕೆ ಮಾರಕ ಎಂದು ತಿಳಿಸಿದ್ದಾರೆ.