News

ವಾರಾಂತ್ಯ, ಮುಷ್ಕರ, ಹಬ್ಬಗಳ ಹಿನ್ನೆಲೆ ಡಿಸೆಂಬರ್ ತಿಂಗಳಲ್ಲಿ 5 ದಿನ ಬ್ಯಾಂಕ್‌ಗೆ ಸಾಲು ರಜೆ...!

ನವದೆಹಲಿ, ಡಿ15(SS): ಡಿಸೆಂಬರ್ ತಿಂಗಳಲ್ಲಿ 5 ದಿನ ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ ಎಂಬ ಸುದ್ದಿ ಇದೀಗ ಚರ್ಚೆಯಾಗುತ್ತಿದೆ. ಮುಷ್ಕರ, ಹಬ್ಬ, ವಾರಾಂತ್ಯ ರಜೆಗಳ ಪರಿಣಾಮವಾಗಿ ಒಟ್ಟು 5 ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿವೆ ಎಂದು ತಿಳಿದುಬಂದಿದೆ.

ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಪ್ರತ್ಯೇಕವಾಗಿ ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಉದ್ದೇಶಿಸಿದ್ದು, ಡಿ.21ಕ್ಕೆ ಬ್ಯಾಂಕ್ ಆಫೀಸರ್ಸ್ ಯೂನಿಯನ್ ಮುಷ್ಕರಕ್ಕೆ ಕರೆ ನೀಡಿದೆ. ಡಿ.22ಕ್ಕೆ ನಾಲ್ಕನೇ ಶನಿವಾರವಾದ ಕಾರಣ ಬ್ಯಾಂಕ್​ಗೆ ರಜೆ ಇದ್ದು, ಡಿ.23 ಭಾನುವಾರ ಮತ್ತು ಡಿ.25ಕ್ಕೆ ಕ್ರಿಸ್​ವುಸ್ ರಜೆ ಇದೆ. 

ಬ್ಯಾಂಕ್ ಒಕ್ಕೂಟಗಳ ಮಹಾವೇದಿಕೆ (ಯುಎಫ್​ಬಿಯು) ಡಿ.26ರಂದು ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಡಿ.24ಹೊರತುಪಡಿಸಿ ಉಳಿದ ಐದು ದಿನ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.