News

ಮಂಗಳೂರು: ಟಿಕೆಟ್ ನೀಡಿದ್ದಲ್ಲಿ ಲೋಕಸಭೆಗೆ ಸ್ಪರ್ಧೆ-ಜನಾರ್ದನ ಪೂಜಾರಿ

ಮಂಗಳೂರು, ಡಿ 09(SM): ಹೈಕಮಾಂಡ್ ಟಿಕೆಟ್ ನೀಡಿದ್ದಲ್ಲಿ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಟಿಕೆಟ್ ನೀಡಿದರೆ ಸ್ಪರ್ಧಿಸುವುದಾಗಿ ಹೈಕಮಾಂಡ್ ಗೆ ಈಗಾಗಲೇ ತಿಳಿಸಿದ್ದೇನೆ. ಪ್ರತಿ ದಿನ ಹೈಕಮಾಂಡ್ ನಿಂದ ನನಗೆ ಪೋನ್ ಮಾಡಿ ಇಲ್ಲಿನ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದು ಇದು ನನಗೆ ತೃಪ್ತಿ ತಂದಿದೆ ಎಂದಿದ್ದಾರೆ.

ರಾಮಮಂದಿರ ನಿರ್ಮಾಣದ ಬಗ್ಗೆ ನಾನು ನೀಡಿದ ಹೇಳಿಕೆಯ ಬಳಿಕ ನನ್ನನ್ನು ಎನ್ ಕೌಂಟರ್ ಮಾಡಿ ಸಾಯಿಸಬೇಕು ಎಂದು ಆಡಿಯೋ ಸಂದೇಶ ನೀಡಿದ ವ್ಯಕ್ತಿ ಗೆ ತೃಪ್ತಿಯಾಗುವುದಿದ್ದರೆ ನನ್ನನ್ನು ಹತ್ಯೆ ಮಾಡಲಿ. ರಾಮಮಂದಿರ ನಿರ್ಮಾಣ ಹೇಳಿಕೆಗೆ ನಾನು ಬದ್ದನಾಗಿದ್ದೇನೆ. ರಾಮ, ಮುಹಮ್ಮದ್ ಪೈಗಂಬರ್, ಯೇಸು ದೇವರೆಂದು ನಂಬುವವ ನಾನು. ಅವರನ್ನು ನಂಬಿ ಎಂದು ಆಯಾಯ ಧರ್ಮದವರಿಗೆ ಹೇಳಿದ್ದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.