News

ಮಂಗಳೂರು: ಸಂಸದ ಪ್ರತಾಪ್ ಸಿಂಹಗೆ ಮಾಹಿತಿಯ ಕೊರತೆ ಇದೆ-ಸಚಿವ ಖಾದರ್

ಮಂಗಳೂರು, ಡಿ 09(SM): ಕೊಡಗು ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರ ನಯಾಪೈಸೆ ಅನುದಾನ ನೀಡಿಲ್ಲ. ಸಂತ್ರಸ್ತರು ಸ್ವಾಭಿಮಾನದ ಬದುಕು ಕಟ್ಟಲು 9.40 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿದ್ದು ರಾಜ್ಯ ಸರಕಾರ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಾದರ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಕೊಡಗು ಸಂತ್ರಸ್ತರಿಗೆ ೫೪೬.೨೧ ಕೋಟಿ ರೂಪಾಯಿ ನಿಧಿ ನೀಡುವುದಾಗಿ ಆದೇಶ ನೀಡಿದ್ದಾರೆ. ಆದರೆ ಕೇಂದ್ರ ಸರಕಾರ ನಯಾಪೈಸೇಯನ್ನು ಕೂಡ ನೀಡಿಲ್ಲ. ಈ ವಿಚಾರದಲ್ಲಿ ದೇಶಕ್ಕೆ ರಾಜ್ಯ ಮಾದರಿಯಾಗಿದೆ ಎಂದರು.

ಸಂಸದ ಪ್ರತಾಪ್ ಸಿಂಹಗೆ ಮಾಹಿತಿಯ ಕೊರತೆಯಿದೆ. ಅವರು ಸ್ಪಷ್ಟ ವಿಚಾರ ತಿಳಿಯದೆ ಪ್ರಚಾರಕ್ಕಾಗಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರಕಾರ ಅನುದಾನ ನೀಡಿದ್ದೇ ಆದಲ್ಲಿ ಸ್ಪಷ್ಟ ಅಂಕಿಅಂಶ ನೀಡಲಿ. ಇವರಿಗೆ ಕೊಡಗು ಜಿಲ್ಲೆಯ ಬಗ್ಗೆ ಕಾಳಜಿ ಇದ್ದಲ್ಲಿ ಪಾರ್ಲಿಮೆಂಟ್ ನಲ್ಲಿ ನೆರೆ ಸಂತ್ರಸ್ತರ ಬಗ್ಗೆ ಮಾತನಾಡಲಿ. ಕೊಡಗು ಜಿಲ್ಲೆಗಾಗಿ ಪ್ರತ್ಯೇಕ ನಿಧಿ ಕೇಳಬೇಕಿತ್ತು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.