News

ಬಜ್ಪೆ: ಅಪ್ರಾಪ್ತೆಯ ಅತ್ಯಾಚಾರ ಮತ್ತು ಕಿಡ್ನಾಪ್ ಪ್ರಕರಣ - ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು,ಡಿ 09( MSP): ಬಜ್ಪೆ ಠಾಣೆಯಲ್ಲಿ‌ ದಾಖಲಾಗಿದ್ದ ಅಪ್ರಾಪ್ತ ವಯಸ್ಕ ಯುವತಿಯ ಅಪಹರಣ ಮತ್ತು ಅತ್ಯಾಚಾರ‌ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಡಿ.8 ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 


ಬಂಧಿತನನ್ನು ಉಡುಪಿ ‌ಜಿಲ್ಲೆ ಎರ್ಮಾಳು‌ ನಿವಾಸಿ ಮೊಹಮ್ಮದ್ ಅಫ್ತಾಝ್ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ತಾಹಿರ್ ನನ್ನು ಈಗಾಗಲೇ ಆರೆಸ್ಟ್ ಮಾಡಲಾಗಿದ್ದು ಸಂತ್ರಸ್ತೆಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿತ್ತು. ಈ ಆರೋಪಿ ಮೊಹಮ್ಮದ್ ಅಫ್ತಾಝ್ ಬಂಧಿಸುವಂತೆ ನ್ಯಾಯಾಲಯ ವಾರಂಟ್ ಹೊರಡಿಸಿದ್ದು, ಈತ ಇಲ್ಲಿಯ ತನಕ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ.

ಆರೋಪಿಯ ಬಂಧನದಲ್ಲಿ ಕಾರ್ಯಾಚರಣೆಯಲ್ಲಿ ಉಪ ವಿಭಾಗದ ಎಸಿಪಿ ಶ್ರೀ ಮಂಜುನಾಥ ಶೆಟ್ಟಿಯವರ‌ ನೇತೃತ್ವದಲ್ಲಿ ಬಜಪೆ ಪೊಲೀಸ್ ‌ನಿರೀಕ್ಷಕರಾದ ಶ್ರೀ ಪರಶಿವ ಮೂರ್ತಿ, ಪಿಎಸ್ ಐ ಶಂಕರ ನಾಯರಿ ಹಾಗೂ ಸಿಬ್ಬಂದಿ ಹಾಗೂ ಪಡುಬಿದ್ರೆ ಪಿಎಸ್ ಐ ಸತೀಶ್ ಎಂ.ಪಿ ಹಾಗೂ ಸಿಬ್ಬಂದಿಯವರು‌ ಭಾಗವಹಿಸಿದ್ದಾರೆ.