News

ಬೆಳ್ತಂಗಡಿ: ಕೊಲೆ ಪ್ರಕರಣದ ಆರೋಪಿಯ ಬಂಧನ

ಬೆಳ್ತಂಗಡಿ, ಡಿ 07(SM): ಕನಕಪುರ ತಾಲೂಕಿನ ಅತ್ತಿಹಳ್ಳಿ ನಿವಾಸಿ ಮಂಜೇಶ್ ಎಸ್(25)ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನಿಗೆ 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಸ್ತುತ ಪೊಲೀಸರು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಐ. ಅವರ ನೇತೃತ್ವದಲ್ಲಿ ಅಲಗೂರು ನಿವಾಸಿ ಉಮೇಶ್‌ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಹೆಚ್ಚಿನ ತನಿಖೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ಮಾಡಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. 

ಇನ್ನು ಉಜಿರೆ ಗ್ರಾಮದ ಗುರಿಪಳ್ಳ ಕ್ರಾಸ್ ಅಳಕೆ ರಸ್ತೆಯಲ್ಲಿ ಮಂಜೇಶ್ ಕೊಲೆಯಾಗಿದ್ದ. ನವಂಬರ್ ೧೧ರಂದು ಗುರಿಪಳ್ಳದಲ್ಲಿ ಮುಖಕ್ಕೆ ಪ್ಲಾಸ್ಟಿಕ್ ಟೇಪ್ ಸುತ್ತಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.