News

ಕಾರವಾರ: ನದಿಯಲ್ಲಿ ಸ್ನಾನಕ್ಕಿಳಿದ ವ್ಯಕ್ತಿ ಮೇಲೆ ಮೊಸಳೆ ದಾಳಿ

ಕಾರವಾರ, ಡಿ 07( MSP): ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವ್ಯಕ್ತಿಯನ್ನು ಮೊಸಳೆಯ ಬಾಯಿಗೆ ಸಿಲುಕಿ ಪವಾಡಸದೃಶ ಘಟನೆ ನ.07 ರ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ದಾಂಡೇಲಿಯ ನಿರ್ಮಲ ನಗರ ನಿವಾಸಿ ನಾಗೇಶ್ ಈಶ್ವರ ಬಳ್ಳಾರಿ (43) ಮೊಸಳೆ ಬಾಯಿಗೆ ಸಿಲುಕಿದವರಾಗಿದ್ದು, ಘಟನೆ ಬಳಿಕ ತೀವ್ರ ಅಸ್ವಸ್ಥರಾಗಿದ್ದಾರೆ.

ಕಾಳಿನದಿ ತಟದ ಈಶ್ವರ ಮಂದಿರದ ಬಳಿ ನಾಗೇಶ್ ಸ್ನಾನಕ್ಕೆಂದು ನದಿಗೆ ಇಳಿದಿದ್ದಾರೆ. ಆದರೆ ತಕ್ಷಣ ಮೊಸಳೆಯೊಂದು ಇವರ ಮೇಲೆ ದಾಳಿ ನಡೆಸಿದೆ. ಆದರೆ ಮೊಸಳೆ ಬಾಯಿಂದ ಪವಾಡಸದೃಶ ಪಾರಾಗಿದ್ದಾರೆ. ಗಾಯಾಳು ನಾಗೇಶ್ ಅವರನ್ನು ಸ್ಥಳೀಯ ಆಸ್ವತ್ರೆಗೆ ದಾಖಲಿಸಲಾಗಿದೆ.

ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.