News

ಏರ್ ಅಂಬುಲೆನ್ಸ್ ನಲ್ಲಿ ಚೆನ್ನೈ ಗೆ ತಲುಪಿದ ಸಿದ್ದಗಂಗಾ ಶ್ರೀ - ಆರೋಗ್ಯ ಸ್ಥಿರ

ಚಿಕ್ಕಮಗಳೂರು, ಡಿ 07 ( MSP): ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಪ್ರಮಾಣದ ಬದಲಾವಣೆ ಆಗಿದ್ದು ಹೆಚ್ಚುವರಿ ಚಿಕಿತ್ಸೆಗಾಗಿ ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ. ಸರ್ಕಾರದ ವೆಚ್ಚದಲ್ಲೇ ಅವರ ಚಿಕಿತ್ಸಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ನಾನು ಈಗಾಗಲೇ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಡೆದಾಡುವ ದೇವರೆಂದೇ ಖ್ಯಾತರಾದ ಡಾ. ಶಿವಕುಮಾರ ಸ್ವಾಮಿಜೀ ಆರೋಗ್ಯ ಕುರಿತು ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಮಾತನಾಡಿದ ಅವರು, ಸ್ವಾಮಿಗಳ ಆರೋಗ್ಯದ ಬಗ್ಗೆ ಆತಂಕದ ಅಗತ್ಯವಿಲ್ಲ, ಅಲ್ಪ ಪ್ರಮಾಣದಲ್ಲಿ ಆರೋಗ್ಯದಲ್ಲಿ ಬದಲಾವಣೆಗಳಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿಕೆ ತಿಳಿಸಿದ್ದಾರೆ. ಶ್ರೀಗಳ ಆರೋಗ್ಯ ಸಂಬಂಧಿಸಿದಂತೆ ಮಠದ ಕಿರಿಯ ಸ್ವಾಮೀಜಿ‌ ಜೊತೆ‌ ನಿರಂತರ‌‌ ಸಂಪರ್ಕದಲ್ಲಿದ್ದೇನೆ ಎಂದರು.

ಇನ್ನು ತುಮಕೂರಿನ ಸಿದ್ದಗಂಗಾ ಮಠದಿಂದ ಬೆನ್ಜ್ ಕಾರಲ್ಲಿ ಹೆಚ್‍ಎಎಲ್ ಏರ್ ಪೋರ್ಟ್ ತಲುಪಿದ್ದ ಶ್ರೀಗಳನ್ನು ಅಲ್ಲಿಂದ ಏರ್ ಅಂಬುಲೆನ್ಸ್ ಮೂಲಕ ಚೆನ್ನೈನಲ್ಲಿರುವ ಪ್ರತಿಷ್ಠಿತ ರೆಲಾ ಆಸ್ಪತ್ರೆಗೀ ಕರೆದೊಯ್ಯಲಾಗಿತ್ತು. ಚೆನ್ನೈ ಏರ್ ಪೋರ್ಟ್ ನಿಂದ ರೇಲಾ ಆಸ್ಪತ್ರೆಗೆ ಸೇರಿದ ವಿಶೇಷ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

 

.