News

ಕೋಸ್ಟಲ್ ವುಡ್ ನಲ್ಲಿ ಪ್ರಪ್ರಥಮ ಬಾರಿಗೆ 'ಇಲ್ಲೊಕ್ಕೆಲ್ ' ನಲ್ಲಿ ಮೂಡಿಬರಲಿದೆ 5D ಸಾಂಗ್..!

ಮಂಗಳೂರು, ಡಿ 07 ( MSP): ಕೊಂಚ ನಿಧಾನವಾದರೂ ತುಳು ಚಿತ್ರರಂಗ ನಿಧಾನವಾಗಿ ಬದಲಾವಣೆಯೆಡೆಗೆ ತೆರೆದುಕೊಳ್ಳುತ್ತಿದೆ. ಕೋಸ್ಟಲ್ ವುಡ್ ಇಂಡಸ್ಟ್ರಿಯಲ್ಲೂ ಹೊಸ ಹೊಸ ಪ್ರಯೋಗಗಳು ನಡೆಯತೊಡಗಿದೆ. ಇದಕ್ಕೀಗ ಹೊಸ ಸೇರ್ಪಡೆ ’ಇಲ್ಲೊಕ್ಕೆಲ್ ’ಸಿನಿಮಾ. ಡಾ| ಸುರೇಶ್‌ ಚಿತ್ರಾಪು ನಿರ್ದೇಶನದಲ್ಲಿ ಶ್ರೀ ಗಜನಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಇಲ್ಲೊಕ್ಕೆಲ್ ಚಿತ್ರದ ಹಾಡೊಂದರಲ್ಲಿ, ಕೋಸ್ಟಲ್ ವುಡ್ ಇಂಡಸ್ಟ್ರಿಯಲ್ಲಿಯೇ ಪ್ರಪ್ರಥಮ ಬಾರಿಗೆ 5D ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ.

ಅಂದಹಾಗೆ ಇಲ್ಲೊಕ್ಕೆಲ್ ಸಿನಿಮಾದಲ್ಲಿ, 3 ಹಾಡುಗಳಿದ್ದು ಇದರಲ್ಲಿ ಒಂದು ಹಾಡಿಗೆ ವಿಶೇಷವಾಗಿ 5D ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು ಇದಕ್ಕಾಗಿ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. 5D ತಂತ್ರಜ್ಞಾನದ ಹಾಡು ಎಂದರೆ ಇದರಲ್ಲಿ ಬೈನೌರಲ್ ರೆಕಾರ್ಡಿಂಗಳು ಇದ್ದು ಹೆಡ್ ಫೋನ್ ಗಳನ್ನು ಬಳಸಿಕೊಂಡು ನಾವು ಬೈನೌರಲ್ ರೆಕಾರ್ಡಿಂಗ್ ಕೇಳಿದಾಗ, ಕೇಳುಗರಿಗೆ ಸಂಗೀತದ ನೈಜತೆಯ ಫೀಲ್ ಕೊಡುತ್ತದೆ. ಅಲ್ಲದೆ ವಿಶೇಷವಾದ ಮತ್ತು ನೈಜವಾದ 360 ಡಿಗ್ರಿ ಶಬ್ದದ ಅನುಭವವು ಕೇಳುಗರನ್ನು ಪುಳಕಿತರನ್ನಾಗಿಸುತ್ತದೆ.

ಇಲ್ಲೊಕ್ಕೆಲ್ ತುಳುವಿನ ವಿಶೇಷ ಪ್ರಯತ್ನವಾಗಿದ್ದು, ಇದರ ಎಲ್ಲಾ ಹಾಡುಗಳ ರೆಕಾರ್ಡಿಂಗ್ ಚೆನೈನಲ್ಲಿ ನಡೆದಿದೆ. ಈ ಸಿನಿಮಾಕ್ಕಾಗಿ ಮೊದಲ ಬಾರಿಗೆ ಕಾಲಿವುಡ್ ನ ಪ್ರಸಿದ್ಧ ಗಾಯಕ ಟಿಪ್ಪು ಅವರು ತುಳು ಚಿತ್ರದಲ್ಲಿ ಹಾಡಿದ್ದಾರೆ. ಇದಲ್ಲದೆ ಮೈಂ ರಾಮದಾಸ್ ಮತ್ತು ಡಾ. ಸುರೇಶ್ ಯಸ್ ಕೋಟ್ಯಾನ್ ಚಿತ್ರಾಪು, ಪಣಂಬೂರು ಬೀಚ್ ಫೆಸ್ಟಿವಲ್ ನ ವಿನ್ನರ್ ರಕ್ಷಿತಾ ಅವರು ಕೂಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕಾಗಿ ರಾಜ್ ಷಾ ಅವರು ಸಂಗೀತ ನೀಡಿದ್ದು. ಸುರೇಶ್ ವಿನ್ಯಾಸ್ ಹಿನ್ನಲೆ ಸಂಗೀತ ನೀಡಿರುತ್ತಾರೆ.