News

ಮಂಗಳೂರು: ಹಣಕ್ಕಾಗಿ ಯುವಕನ ಕಿಡ್ನಾಪ್, ಮಾರಣಾಂತಿಕ ಹಲ್ಲೆ - ಇಬ್ಬರ ಬಂಧನ

ಮಂಗಳೂರು,ಡಿ 07 ( MSP): ನಗರದ ಪಳ್ನೀರ್ ನಿಂದ ಯುವಕನನ್ನು ಅಪಹರಿಸಿದ ಐವರು ದುಷ್ಕರ್ಮಿಗಳ ತಂಡ, ಆತನ ಮೇಲೆ ಹಲ್ಲೆ ಮಾಡಿ, ಹಣ ವಸೂಲಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಫಳ್ನೀರ್ ನಿವಾಸಿ ಶಿಮಾಕ್‌ ಹಸನ್‌ ಹಲ್ಲೆಗೆ ಒಳಗಾದ ಯುವಕ. ಗೌತಮ್‌ ಹಾಗೂ ಲಾಯ್‌ ವೇಗರ್‌ ಬಂಧಿತ ಆರೋಪಿಗಳು.

ಘಟನೆಗೆ ಸಂಬಂಧಪಟ್ಟಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ , ಗೌತಮ್, ಲಾಯ್ ವೆಗರ್, ಅಂಕಿತ್, ಅದಿತ್ಯ ವಾಲ್ಕೆ, ವಿರುದ್ದ ದೂರು ದಾಖಲಾಗಿತ್ತು

ಘಟನೆಯ ವಿವರ: ಶಿಮಾಕ್ ನಗರದ ಕಾಲೇಜೊಂದರಲ್ಲಿ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದರು.ಡಿ.೦೫ ರಂದು ಸಂಜೆ ಅತ್ತಾವರದ ಮಳಿಗೆಯೊಂದರಲ್ಲಿ ಸ್ಬೇಹಿತರೊಂದಿಗೆ ಕಾಫಿ ಕುಡಿಯುತ್ತಾ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಶಿಮಾಕ್‌ನ ಸ್ನೇಹಿತ ಅಂಕಿತ್‌ ಎಂಬಾತ, ಸ್ವಲ್ಪ ಕೆಲಸವಿದೆ ಎಂದು ಶಿಮಾಕ್‌ನನ್ನು ಬೈಕ್‌ನಲ್ಲಿ ಕರೆ ದೊಯ್ದಿದ್ದ. ಅರ್ಧ ಗಂಟೆಯಾದರೂ ಶಿಮಾಕ್‌ ಮರಳಿ ಬಾರದೇ ಇದ್ದು ದರಿಂದ ಗಾಬರಿಗೊಂಡ ಸ್ನೇಹಿತರು ಶಿಮಾಕ್ ಅವರ ಮೊಬೈಲ್‌ಗೆ ಕರೆ ಮಾಡಿದಾಗ ದುಷ್ಕರ್ಮಿಗಳು ಶಿಮಾಕ್ ನನ್ನು ಮೂಡುಬಿದಿರೆಗೆ ಕರೆದೊಯ್ಯುತ್ತಿದ್ದೇವೆ ತಕ್ಷಣ 50 ಸಾವಿರ ನೀಡಿ ಇಲ್ಲದಿದ್ದರೆ ಆತನನ್ನು ಬಿಡುವುದಿಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದರಿಂದ ಬೆದರಿದ ಅವರು ಶಿಮಾಕ್ ಕುಟುಂಬಸ್ಥರನ್ನು ಒಪ್ಪಿಸಿ 20 ಸಾವಿರ ನೀಡಲು ಒಪ್ಪಿದ್ದಾರೆ.

ಅದರಂತೆ ಕೆಪಿಟಿ ಬಳಿ ದುಷ್ಕರ್ಮಿಗಳ ಹಣ ತಲುಪಿಸಿದ ತಕ್ಷಣ ಶಿಮಾಕ್ ನನ್ನು, ಕಾರಿನಿಂದ ತಳ್ಳಿ ಪರಾರಿ ಯಾಗಿದ್ದಾರೆ. ದುಷ್ಕರ್ಮಿಗಳು ಶಿಮಾಕ್‌ನಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದಲ್ಲದೆ ಸಿಗರೇಟ್ ನಿಂದ ಸುಟ್ಟಿದ್ದಾರೆ. ಗಾಯಗೊಂಡಿರುವ ಶಿಮಾಕ್‌ನನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಹರಣಕ್ಕೆ ಬಳಸಲಾದ ಸ್ವಿಫ್ಟ್ ಕಾರ್ ಹಾಗೂ ಅದರಲ್ಲಿದ್ದ ಕಬ್ಬಿಣದ ರಾಡ್ ಗಳನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.