News

ಉಡುಪಿ: ಬಿಜೆಪಿ ಹಾಗೂ ಭಜರಂಗ ದಳದ ಮುಖಂಡರ ನಡುವೆ ಘರ್ಷಣೆ

ಉಡುಪಿ, ಡಿ 06(SM): ಬಿಜೆಪಿ ಹಾಗೂ ಭಜರಂಗ ದಳದ ಮುಖಂಡರು ಗೂಂಡಾಗಿರಿ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಕರ್ಜೆ ಶ್ರೀ ಮಹಾಲಿಂಗೇಶ್ವರ ದೇಗುಲದ ಅನುವಂಶಿಕ ಅರ್ಚಕರಾದ ರಾಮಕೃಷ್ಣ ಅಡಿಗ ಹಾಗೂ ಶ್ರೀಕಾಂತ್ ಅಡಿಗ ಪೂಜಾ ಕೆಲಸದಲ್ಲಿ ತೊಡಗಿದ್ದ ವೇಳೆ ಇವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಲಾಗಿದೆ.

ಕರ್ಜೆ ಬಿಜೆಪಿ ಮುಖಂಡ ಸುಧಾಕರ್ ಸುಗ್ಗಿ, ಸುರೇಶ್ ಶೆಟ್ಟಿ ತಡಾಲ್, ಬಾಲಕೃಷ್ಣ ಶೆಟ್ಟಿ ಪಂಜಿಬೆಟ್ಟು ಮೊದಲಾದ 20ಕ್ಕೂ ಅಧಿಕ ಕಾರ್ಯಕರ್ತರು ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ದೇವಸ್ಥಾನದ ಆಡಳಿತ ಸಮಿತಿಗೆ ಸಂಬಂಧಪಟ್ಟು ಇರುವ ವಿವಾದದ ಹಿನ್ನೆಲೆಯಲ್ಲಿ ಈ ಹೊಡೆದಾಟ ನಡೆದಿದೆ ಎಂದು ತಿಳಿದು ಬಂದಿದೆ.