News

ಬೆಂಗಳೂರು: ನನ್ ಹೆಂಡ್ತಿ ನೀಲಿ ಚಿತ್ರಗಳಲ್ಲಿ ನಟಿಸಿದ್ದಾಳೆ ಎಂದ ಪೊಲೀಸರಿಗೆ ದೂರು ಕೊಟ್ಟ ಬ್ಲೂಫಿಲ್ಮ್ ವ್ಯಸನಿ..!

ಬೆಂಗಳೂರು, ಡಿ 06 (MSP): ಬ್ಲೂ ಫಿಲಂ ವೀಕ್ಷಣೆಯ ಚಟ ಹೊಂದಿದ್ದ 37 ವರ್ಷದ ಪತಿರಾಯನೊಬ್ಬ, ತನ್ನ ಹೆಂಡತಿಯೂ ಅಶ್ಲೀಲ ಚಿತ್ರವೊಂದರಲ್ಲಿ ನಟಿಸಿದ್ದಾಳೆ ಎಂದು ಪೊಲೀಸರಿಗೆ ದೂರು ಸಲ್ಲಿಸಲು ಹೋದ ಘಟನೆ ನಡೆದಿದೆ. ಅಂತರ್ಜಾಲದಲ್ಲಿ ನಾನೊಂದು ನೀಲಿ ಚಿತ್ರವನ್ನು ನೋಡಿದ್ದು ಇದರಲ್ಲಿ ನನ್ನ ಪತ್ನಿ ನಟಿಸಿದ್ದಾಳೆ ಎಂದು ತನ್ನ ಗರ್ಭಿಣಿ ಹೆಂಡತಿಯನ್ನೇ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ಕರೆದುಕೊಂಡು ಬಂದು, ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ.

ನೀಲಿ ಚಿತ್ರಗಳನ್ನು ನೋಡುವುದು ಮತ್ತು ತನ್ನ ಪತ್ನಿಯ ಶೀಲದ ಬಗ್ಗೆ ಶಂಕಿಸುವ ಚಟ ಹೊಂದಿದ್ದ ಆತ ಕೊನೆಗೆ ಪತ್ನಿ ಗರ್ಭಿಣಿ ಎಂದು ನೋಡದೆ ಆಕೆಯನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾನೆ. ಆತನ ಆರೋಪವನ್ನು ಪರಿಶೀಲಿಸಿದ ಸೈಬರ್ ಅಪರಾಧ ವಿಭಾಗದ ಪೊಲೀಸರು, ಆತ ನೋಡಿದ ನೀಲಿ ಚಿತ್ರದ ದೃಶ್ಯದಲ್ಲಿರುವುದು ಆತನ ಪತ್ನಿಯಲ್ಲ ಎಂದು ದೃಢಪಡಿಸಿದ್ದಾರೆ. ಆದರೂ ಸಮಾಧಾನವಾಗದೇ ಆತ ಹೆಚ್‌ಎಲ್ ಪೊಲೀಸ್ ಠಾಣೆ ಪೊಲೀಸ್ ಆಯುಕ್ತರ ಕಚೇರಿ ಮತ್ತು ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ನ್ಯಾಯ ನೀಡಿ ಎಂದು ಅಲೆದಾಡಿದ್ದಾನೆ.

ಕೊನೆಗೆ ಬೇಸತ್ತ ಪೊಲೀಸರು, ಆತನಿಗೆ ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಮಾನಸಿಕ ತಜ್ಞರನ್ನು ಬೇಟಿಯಾಗಲು ಈತ ನಿರಾಕರಿಸಿದ್ದಾನೆ. ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದ ಪತಿ ನಡತೆಯಿಂದ ಬೇಸತ್ತು ಗಂಡನನ್ನು ತೊರೆದು ಪತ್ನಿ ತವರು ಮನೆ ಸೇರಿದ್ದಾಳೆ.

ಈ ವಿಚಿತ್ರ ವರ್ತನೆಯ ವ್ಯಕ್ತಿಯನ್ನು ಬೆಂಗಳೂರಿನ ನಿವಾಸಿಯಾಗಿರುವ ವೆಂಕಟೇಶ್ ಎಂದು ಗುರುತಿಸಲಾಗಿದೆ. ಈತ ನಗರದ ಇ-ಕಾಮರ್ಸ್ ಪೋರ್ಟಲ್ ವೊಂದರ ಸಾಮಾಗ್ರಿ ವಿತರಕನಾಗಿ ಕೆಲಸ ಮಾಡುತ್ತಿದ್ದ, ಈತ ನೀಲಿ ಚಿತ್ರಗಳ ವೀಕ್ಷಣೆಯ ಚಟ ಬೆಳೆಸಿಕೊಂಡಿದ್ದ. ಆರು ವರ್ಷಗಳ ಹಿಂದೆ ವಿವಾಹವಾಗಿದ್ದ ಇವನು ಈಗಾಗಲೇ ಒಂದು ಮಗುವಿನ ತಂದೆಯಾಗಿದ್ದಾನೆ.