News

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಂಟ್ವಾಳದಲ್ಲಿ ನಡೆಯಿತು ಮಹಾರುದ್ರ ಯಾಗ

ಬಂಟ್ವಾಳ, ಡಿ06(SS); ಬಂಟ್ವಾಳದಲ್ಲಿ ನರೇಂದ್ರ ಮೋದಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಯೋಗ ಬರುವಂತೆ ಕೋರಿ ಮಹಾರುದ್ರ ಯಾಗ ನಡೆಸಲಾಗಿದೆ.

ತಾಲೂಕಿನ ಕಕ್ಕೆಪದವು ಎಂಬಲ್ಲಿ ಮಹಾರುದ್ರ ಯಾಗ ನಡೆದಿದೆ. ಬಂಟ್ವಾಳದ ಸ್ಥಳೀಯ ಸಂಘಟನೆ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಮೋದಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಯೋಗ ಬರುವಂತೆ ಕೋರಿ ಮಹಾರುದ್ರ ಯಾಗವನ್ನು ಆಯೋಜನೆ ಮಾಡಲಾಗಿತ್ತು.

ಕಾರಿಂಜ ಕೊಡಂಬೆಟ್ಟು ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ಈ ಯಾಗ ಮಾಡಲಾಗಿದ್ದು, ಅನೇಕ ಜನ ಭಕ್ತರು ಭಾಗಿಯಾಗಿದ್ದರು. ಈಗಾಗಲೇ ಜಿಲ್ಲೆಯಲ್ಲಿ ಮುಂಬರುವ ಚುನಾವಣೆಯ ಗೆಲುವಿನ ಲೆಕ್ಕಾಚಾರ , ತಂತ್ರಗಾರಿಕೆ ಆರಂಭವಾಗಿದೆ. ಈ ನಡುವೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಲಾಗುತ್ತಿದೆ.