News

ಎಷ್ಟು ವಯಸ್ಸಾಯ್ತು ನನಗೆ ? - ಶತಯುಷಿ ಸಿದ್ದಗಂಗಾ ಶಿವಕುಮಾರ ಸ್ವಾಮಿ ಪ್ರಶ್ನೆ

ತುಮಕೂರು, ಡಿ 06 (MSP): ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಹಿರಿಯಶ್ರೀ ಡಾ. ಶ್ರೀ ಶಿವಕುಮಾರ ಶ್ರೀಗಳನ್ನು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಡಿ.೬ ರ ಗುರುವಾರ ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಿದರು.

ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿ ಶ್ರೀಗಳ ಹೃದಯ ಬಡಿತದಲ್ಲಿ ಏರುಪೇರಾಗಿತ್ತು. ಅಲ್ಲದೆ ಸ್ವಲ್ಪ ಜ್ವರವೂ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ವೈದ್ಯರು ಮಠಕ್ಕೆ ಧಾವಿಸಿ ಚಿಕಿತ್ಸೆ ನೀಡಿದರು.

ಇನ್ನು ಡಾ. ಜಿ. ಪರಮೇಶ್ವರ್, ಶ್ರೀಗಳ ಆರೋಗ್ಯ ವಿಚಾರಿಸಿದಾಗ ಡಾ. ಜಿ ಪರಮೇಶ್ವರ್​​ ಅವರ ಜೊತೆ ಶ್ರೀಗಳು ಮಾತನಾಡಿ ಯಾವಾಗ ಬಂದಿರಿ? ಹೇಗಿದ್ದೀರಾ ಚೆನ್ನಾಗಿದ್ದೀರಾ ಎಂದು ವಿಚಾರಿಸಿದರು. ಆ ಬಳಿಕ ಸನಿಹದಲ್ಲಿಯೇ ಇದ್ದ ಕಿರಿಯ ಶ್ರೀಗಳ ಬಳಿ ಶಿವಕುಮಾರ್ ಶ್ರೀಗಳು ‘ನನಗೆ ಎಷ್ಟು ವರ್ಷವಾಯಿತು? ಎಂದು ವಿಚಾರಿಸಿದ್ದಾರೆ. ಅದಕ್ಕೆ ಕಿರಿಯ ಶ್ರೀಗಳು‌ ಹಿರಿಯ ಶ್ರೀಗಳಲ್ಲಿ ನೂರಹನ್ನೊಂದು ಎಂದಾಗ ಪ್ರತಿಕ್ರಿಯಿಸಿ ‘ಬಹಳಾ ಆಯ್ತು., ವರ್ಷ ಬಹಳ ಆಯ್ತು!’ ಎಂದು ಲವಲವಿಕೆಯಿಂದಲೇ ಅಚ್ಚರಿ ವ್ಯಕ್ತಪಡಿಸಿದರು ಎಂದು ಡಿಸಿಎಂ ಪರಮೇಶ್ವರ್​ ಮಾದ್ಯಮಗಳಿಗೆ ತಿಳಿದ್ದಾರೆ.