News

ಮಂಗಳೂರು: ಬಾಬರಿ ಮಸೀದಿ ಧ್ವಂಸ ದಿನ ಹಿನ್ನೆಲೆ ಮಂಗಳೂರಿನಲ್ಲಿ ನಿಷೇಧಾಜ್ಞೆ

ಮಂಗಳೂರು, ಡಿ 05(SM): ಡಿಸೆಂಬರ್ 06ರಂದು ಬಾಬರಿ ಮಸೀದಿ ಧ್ವಂಸ ದಿನವಾದ ಹಿನ್ನೆಲೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಿ ನಗರ ಪೊಲೀಸ್ ಆಯಕ್ತ ಟಿ‌.ಆರ್.ಸುರೇಶ್ ಆದೇಶ ನೀಡಿದ್ದಾರೆ.

ಮಸೀದಿ ಧ್ವಂಸ ದಿನವನ್ನು ಕರಾಳ ದಿನ ಅಥವಾ ವಿಜಯೋತ್ಸವ ಆಚರಣೆ ಸಾಧ್ಯತೆ ಹಿನ್ನೆಲೆ ನಿರ್ಬಂಧಕಾಜ್ಞೆ ವಿಧಿಸಲಾಗಿದೆ. ಇನ್ನು ಈ ದಿನದಂದು ಮೆರವಣಿಗೆ, ಜಾಥಾ, ಮುಷ್ಕರ, ರಾಸ್ತಾರೋಕೋ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ರ ತನಕ‌ ನಿರ್ಬಂಧಕಾಜ್ಞೆ ವಿಧಿಸಿ ಆದೇಶ ನೀಡಿದ್ದಾರೆ. 

ಕರ್ನಾಟಕ ಪೊಲೀಸ್ ಕಾಯ್ದೆ 35ರಂತೆ ಮಂಗಳೂರು ನಗರ ವ್ಯಾಪ್ತಿಗೆ ಅನ್ವಯಿಸುವಂತೆ ಈ ಆದೇಶ ನೀಡಲಾಗಿದೆ.