News

ಮಂಗಳೂರು: ಹೋಂ ಸ್ಟೇ ದಾಳಿ ಪ್ರಕರಣ- ಪತ್ರಕರ್ತ ನವೀನ್‌ ಸೂರಂಜೆ ನಿರ್ದೋಷಿ - ಕೋರ್ಟ್ ತೀರ್ಪು

ಮಂಗಳೂರು,ಡಿ 05 (MSP): ರಾಜ್ಯದಲ್ಲಿ ಭಾರೀ ಚರ್ಚೆಗೀಡು ಮಾಡಿದ್ದ ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಸುದ್ದಿ ಸಂಗ್ರಹಿಸಲು ಹೋಗಿದ್ದ ಪತ್ರಕರ್ತರನ್ನೇ ಆರೋಪಿಗಳನ್ನಾಗಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಕರ್ತ ನವೀನ್‌ ಸೂರಿಂಜೆ ಅವರನ್ನು ನಿರ್ದೋಷಿ ಎಂದು ನಗರದ 6 ನೇ  ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ಬುಧವಾರ ತೀರ್ಪು ನೀಡಿದೆ. 


2012 ಜು. 28ರಂದು ಪಡೀಲ್ ಬಡ್ಲಗುಡ್ಡೆ ಮಾರ್ನಿಂಗ್‌ಮಿಸ್ಟ್ ಹೋಂ ಸ್ಟೇ ಪಾರ್ಟಿಯಲ್ಲಿ ತೊಡಗಿದ್ದ ಯುವಕ ಯುವತಿ ಮೇಲೆ ಹಿಂದೂ ಜಾಗರಣ ವೇದಿಕೆ ದಾಳಿ ಸಂದರ್ಭ ಪತ್ರಕರ್ತ ನವೀನ್‌ ಸೂರಂಜೆ ಮತ್ತು ಕ್ಯಾಮರಾಮನ್ ಶರಣ್‌ರಾಜ್ ಸ್ಥಳಕ್ಕೆ ಸುದ್ದಿ ಸಂಗ್ರಹಕ್ಕಾಗಿ ತೆರಳಿದ್ದರು. ಆದರೆ ಘಟನೆ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಸಕಾಲದಲ್ಲಿ ಪೊಲೀಸರಿಗೆ ಮಾಹಿತಿ ನೀಡದ ಕಾರಣಕ್ಕೆ ಅವರ ವಿರುದ್ಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ನವೀನ್‌ ಸೂರಂಜೆ ನಾಲ್ಕೂವರೆ ತಿಂಗಳ ಜೈಲುವಾಸ ಅನುಭವಿಸಿದ್ದರು.

ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ನವೀನ್ ಪತ್ರಕರ್ತನಾಗಿ ಮಾಹಿತಿ ಸಂಗ್ರಹಿಸಲು ಹೋಗಿದ್ದ. ಅವರು ಸಂಗ್ರಹಿಸಿದ ಮಾಹಿತಿಯನ್ನು ಸಾಕ್ಷವಾಗಿ ಪರಿಗಣಿಸಬೇಕೆ ಹೊರತು ಆತನನ್ನೇ ಆರೋಪಿ ಎಂದು ಪರಿಣಿಗಸುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ಹಲವೆಡೆಯಿಂದ ಕೇಳಿಬಂದಿತ್ತು.