ಮಂಗಳೂರು, ಡಿ 05 (MSP): ನಗರದ ಕಾವೂರಿನಲ್ಲಿರುವ ಬೇಕರಿ, ಹೋಟೇಲ್ , ಪಾಸ್ಟ್ ಫುಡ್ ಅಂಗಡಿ , ದಿನಸಿ ಸೇರಿದಂತೆ 30ಕ್ಕೂ ಹೆಚ್ಚು ಅಂಗಡಿ ಮಳಿಗೆಗಳ ಮೇಲೆ ಆಹಾರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ ಘಟನೆ ಡಿ.05 ರ ಬುಧವಾರ ನಡೆದಿದೆ. 

 

ದಾಳಿ ನಡೆಸಿದ ಸಂದರ್ಭ, ಹಲವು ಅಂಗಡಿಗಳಲ್ಲಿ, ಆಹಾರ ಇಲಾಖೆಯ ಪ್ರಮಾಣ ಪತ್ರ ಹಾಗೂ ಪರವಾನಗಿ ರಹಿತ ಅಂಗಡಿ ಹಾಗೂ ದಂಡ ಮತ್ತು ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘಿಸಿರುವುದು ಕಂಡು ಬಂತು. ಈ ಮಳಿಗೆಗಳ ವಿರುದ್ಧ ಕ್ರಮ ಕೈಗೊಂಡ ಅಧಿಕಾರಿಗಳು ಮಳಿಗೆ ಮಾಲೀಕರಿಗೆ ತಂಬಾಕು ಬಗ್ಗೆ ಜಾಗೃತಿ ಫಲಕ ಹಾಕುವಂತೆ ಆದೇಶ ನೀಡಿದರು. ಕೆಲವು ಅಂಗಡಿಗಳಿಗೆ ದಂಡ ವಿಧಿಸಿದ ಅಧಿಕಾರಿಗಳು ನಿಯಮ ಪಾಲಿಸುವಂತೆ
ಖಡಕ್ ಸೂಚನೆ ನೀಡಿದ್ದಾರೆ.

ದಾಳಿ ಕಾರ್ಯಾಚರಣೆಯಲ್ಲಿ ಜಿಲ್ಲಾ ಆಹಾರ ಮತ್ತು ಸುರಕ್ಷತಾ ಕಾಯ್ದೆ ಅಧಿಕಾರಿ,ಎ ನ್ ಟಿ ಸಿ ಟಿ ಪ್ರೋಗ್ರಾಂ ಆಫೀಸರ್ ಡಾ.ಪ್ರವೀಣ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಕಾರ್ಯಾಚರಣೆಯಲ್ಲಿ ಕಾವೂರು ಠಾಣಾ ಪೊಲೀಸ್ ಅಧಿಕಾರಿಗಳು ಡಾ. ಜಾನ್, ಖಾದರ್, ಶೃತಿ ಮತ್ತಿತರರು ಭಾಗಿಯಾಗಿದ್ದರು.