News

ಕರ್ನಾಟಕ ರಾಜಕಾರಣದಲ್ಲಿ ಧಮಾಕಾ ಸಂಭವಿಸುತ್ತದೆ - ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿ

ರಾಜಸ್ಥಾನ,ಡಿ 05 (MSP): ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಯಾವಾಗ ಬೇಕಾದ್ರೂ ಸ್ಪೋಟ ಸಂಭವಿಸಬಹುದು ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ.

ರಾಜಸ್ಥಾನ ಚುನಾವಣಾ ಪ್ರಚಾರದ ವೇಳೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಯಾವಾಗ ಬೇಕಾದರೂ ಧಮಾಕ ಆಗಬಹುದು. ಆದರೆ ಈ ಧಮಾಕಾ ಯಾವಾಗ ಆಗುತ್ತೆ ಅನ್ನೋದನ್ನು ಮಾತ್ರ ಯಡಿಯೂರಪ್ಪವರೇ ಹೇಳಬಲ್ಲರು. ಕರ್ನಾಟಕದಲ್ಲಿ ಅಸ್ಥಿರ ಸರ್ಕಾರ ಅಸ್ತಿತ್ವದಲ್ಲಿ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕಲ್ಲಿ ಬಿಜೆಪಿ ಪಕ್ಷಕ್ಕೆ ಜನರ ಆಶೀರ್ವಾದ ಹೆಚ್ಚು ಸಿಕ್ಕಿತ್ತು ನಾವೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೆವು. ನಮಗೆ 7 ಶಾಸಕರ ಸಂಖ್ಯೆಯಷ್ಟೇ ಕೊರತೆ ಇತ್ತು. ಆದರೆ ಜೆಡಿಎಸ್, ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡಿ ಜನರನ್ನು ವಂಚಿಸಿದೆ ಎಂದರು.

ಅಧಿಕಾರಕ್ಕಾಗಿ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿರುವುದೇ ವಿಶೇಷ. ಮೈತ್ರಿ ಸರ್ಕಾರದಲ್ಲಿ ಅಸ್ಥಿರ ಸರ್ಕಾರವಾಗಿದೆ. ಧಮಾಕಾ ಎಲ್ಲಿಂದ ಆಗುತ್ತೋ ಗೊತ್ತಿಲ್ಲ. ಈ ಬಗ್ಗೆ ಯಡಿಯೂರಪ್ಪನವೇ ಹೇಳಬೇಕು ಎಂದು ಬಾಂಬ್ ಸಿಡಿಸಿದ್ದಾರೆ.