News

ಎನ್.ಸಿ.ಸಿ. ಆರ್ಮಿ ಕೆಡೆಟ್ ಧನ್ಯ ಶೆಟ್ಟಿ ಕುಂದಾಪುರದ ಹೆಮ್ಮೆ

ಕುಂದಾಪುರ,ಡಿ 05 (MSP): ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ, ಎನ್.ಸಿ.ಸಿ. ಆರ್ಮಿ ಕೆಡೆಟ್ , ದ್ವಿತೀಯ ಬಿ.ಎ.ಅಭ್ಯಾಸುತ್ತಿರುವ ಧನ್ಯ ಶೆಟ್ಟಿ, ಆಗ್ರಾದಲ್ಲಿ ದಿನಾಂಕ 01 ನವಂಬರ 2018 ರಿಂದ 27 ನವಂಬರ 2018 ರ ವರೆಗೆ ನಡೆದ ’ಪ್ಯಾರಾ ಬೇಸಿಕ್ ಕೋರ್ಸ್’ ನಲ್ಲಿ ಭಾಗವಹಿಸಿದ್ದರು.

ಇವರು ಎನ್.ಸಿ.ಸಿ. ಗ್ರೂಪ್, ಮಂಗಳೂರಿನಿಂದ ಆಯ್ಕೆಗೊಂಡು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿರುತ್ತಾರೆ. ಈ ಮೂಲಕ ಕಾಲೇಜಿಗೆ ಹಾಗೂ ಮಂಗಳೂರು ಗ್ರೂಪ್ ಎನ್.ಸಿ.ಸಿ. ಗೆ ಹೆಮ್ಮೆಯನ್ನು ತಂದು ಕೊಟ್ಟಿರುತ್ತಾರೆ.

ಸುಮಾರು 1500 ಮೀಟರ್ ಎತ್ತರದಿಂದ ವಿಮಾನ ಮೂಲಕ ಸಾಗಿ, ಗಗನಕ್ಕೆ ಧುಮುಕಿ, ಪ್ಯಾರಾಚೂಟ್ ಮುಖಾಂತರ ಸುರಕ್ಷಿತವಾಗಿ ಭೂಸ್ಪರ್ಶ ಪಡೆಯುವ ನೈಪುಣ್ಯತೆಯನ್ನು ಗಳಿಸಿರುತ್ತಾರೆ. ಇವರನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ, ಎನ್.ಸಿ.ಸಿ. ಅಧಿಕಾರಿ ಲೆ| ಅಂಜನಕುಮಾರ್, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.