News

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮಾಜಿ ಶಾಸಕ ಸಂಭಾಜಿ ಪಾಟೀಲ್ ಪುತ್ರ ಸಾವು

ಬೆಂಗಳೂರು,ಡಿ 04 (MSP): ಬೆಳಗಾವಿಯ ಎಂಇಎಸ್‌ ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಅವರ ಪುತ್ರ ರಾತ್ರಿ ರೈಲಿನಿಂದ ಬಿದ್ದು ಸಾವನಪ್ಪಿರುವ ಘಟನೆ ಮಲ್ಲೇಶ್ವರ ರೈಲು ನಿಲ್ದಾಣದ ಬಳಿ ನಡೆದಿದೆ.


ಸಾಗರ್‌ ಸಾಂಬಾಜಿ ಪಾಟೀಲ್‌ (38) ಅವರು ಸ್ನೇಹಿತರೊಂದಿಗೆ ಬೆಳಗಾವಿಗೆ ತೆರಳಲೆಂದು ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಶ್ರೀರಾಂಪುರ ಬಳಿ ಬಂದಾಗ ಸಾಗರ್‌ ಅಚಾನಕ್ ಆಗಿ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮವಾಗಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ತಲೆಗೆ ಗಂಭೀರ ಸ್ವರೂಪದ ಗಾಯವಾದ ಕಾರಣ ಸಾಗರ್‌ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಾಗಿದೆ.