News

ಕಾರ್ಕಳ: ಜ. 27 ರಿಂದ 31ರವೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವದ ಸಂಭ್ರಮ

ಕಾರ್ಕಳ,ಡಿ 04 (MSP): ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವವು ಜನವರಿ 27,28,29,30 ಮತ್ತು 31 ರಂದು ಜರಗಲಿದೆ. ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಿ ಎಂಬ ವಿಶೇಷ ಸಂದೇಶವು ಮಹೋತ್ಸವದ ವಿಷಯವಾಗಿರುತ್ತದೆ.

ಜನವರಿ 27ರ ಸಂಜೆ 5 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಇವರ ಸಾರಥ್ಯದಲ್ಲಿ ದಿವ್ಯ ಬಲಿ ಪೂಜೆ ನಡೆಯಲಿದೆ.
ಜನವರಿ 28ರಂದು ಸಂಜೆ 3.30 ಕ್ಕೆ ಗುಲ್ಬರ್ಗ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ರೋಬರ್ಟ್ ಮಿರಾಂದ ಅವರಿಂದ ಬಲಿಪೂಜೆ ನೆರವೇರಲಿದೆ.
ಜನವರಿ 29ರಂದು ಮಂಗಳೂರು ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ಬಲಿಪೂಜೆ ಜರಗಲಿರುವುದು.
ಜನವರಿ 30ರ ಸಂಜೆ 5.30ಕ್ಕೆ ಬೆಳ್ತಂಗಡಿಯ ಧರ್ಮಧ್ಯಕ್ಷ ಪರಮಪೂಜ್ಯ ಲೊರೆನ್ಸ್ ಮುಕ್ಕಿಝಿ ಇವರಿಂದ ಬಲಿಪೂಜೆ ನಡೆಯಲಿದೆ.
ಜನವರಿ 31ರ ಬೆಳಿಗ್ಗೆ 10.30ಕ್ಕೆ ಉಡುಪಿ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಜೆರಾಲ್ಡ್ ಲೋಬೋ ನೇತೃತ್ವದಲ್ಲಿ ಜರಗುವ ಬಲಿಪೂಜೆಯೊಂದಿಗೆ ವಾರ್ಷಿಕ ಮಹೋತ್ಸವವು ಸಂಪನ್ನಗೊಳ್ಳಲಿದೆ.

 

ವಿಶೇಷ ಪೂಜೆ : ಜನವರಿ 18ರಿಂದ ಬೆಳಿಗ್ಗೆ 8.30 ಗಂಟೆಗೆ ದಿವ್ಯ ಬಲಿಪೂಜೆ, ನೊವೆನಾ ಪ್ರಾರ್ಥನೆ ಹಾಗೂ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆ ಜರಗಲಿರುವುದು. ಜನವರಿ 27ರಂದು ಮಧ್ಯಾಹ್ನ 3 ಹಾಗೂ ಸಂಜೆ 4 ಗಂಟೆಗೆ ಕೊಂಕಣಿಯಲ್ಲಿ ಮಕ್ಕಳಿಗಾಗಿ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. 

ಜನವರಿ 28ರಂದು ಬೆಳಿಗ್ಗೆ 10 ಗಂಟೆಗೆ ಹಾಗೂ ಮಧ್ಯಾಹ್ನ 3.30 ಕ್ಕೆ ಕೊಂಕಣಿಯಲ್ಲಿ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು.
ಮಹೋತ್ಸವದ ಐದು ದಿನಗಳಲ್ಲಿ ದಿವ್ಯ ಬಲಿಪೂಜೆಯ ಬಳಿಕ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನಾ ವಿಧಿ ಇರುವುದು ಎಂದು ಧರ್ಮ ಕೇಂದ್ರದ ಪ್ರಧಾನ ಗುರು ಬಸಿಲಿಕದ ನಿರ್ದೇಶಕರಾದ ವಂದನೀಯ ಜಾರ್ಜ್ ಡಿಸೋಜಾ , ಸಹಾಯಕ ಧರ್ಮ ಗುರು ವಂ. ಜೆನ್ನಿಲ್ ಆಳ್ವ, ಪಾಲನಾ ಮಂಡಳಿಯ ಕಾರ್ಯದರ್ಶಿ ಅಲೀನಾ ಡಿಸಿಲ್ವ, ಉಪಾಧ್ಯಕ್ಷ ಜೋನ್ ಡಿಸಿಲ್ವ ಜಂಟೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.