News

ವಿಟ್ಲ: ಬಾವಿಗೆ ಹಾರಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ಆತ್ಮಹತ್ಯೆ

ವಿಟ್ಲ, ಡಿ 04 (MSP): ದೇವಸ್ಥಾನದ ಅರ್ಚಕರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ‌. ಅರ್ಚಕ ವಾಸುದೇವ ಕೆದಿಲಾಯ(77) ಆತ್ಮಹತ್ಯೆಗೈದವರು. ಇವರು ಕೆಲವು ವರ್ಷಗಳ ಹಿಂದೆ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಬಳಿಕ ನಿವೃತ್ತರಾಗಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಾನಸಿಕ ಮನನೊಂದು ಮನೆಯ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.