News

ಮಂಗಳೂರು: 3 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಬಸ್

ಮಂಗಳೂರು, ಡಿ03(SS): ರಕ್ಷಿಕಾ ಎಂಬ ಹೆಸರಿನ ಖಾಸಗಿ ಬಸ್ಸೊಂದು ಮಂಗಳೂರು ನಗರದಲ್ಲಿ ವಿಭಿನ್ನವಾಗಿ, ಇದೇ ಮೊದಲ ಬಾರಿಗೆ ಹುಟ್ಟುಹಬ್ಬ ಆಚರಿಸುವ ಮೂಲಕ ನಾಲ್ಕನೇ ವರ್ಷಕ್ಕೆ ಕಾಲಿರಿಸಿದೆ.

ನಗರದ ಸ್ಟೇಟ್‌ಬ್ಯಾಂಕ್‌ನಿಂದ ಬಜಪೆ ಮಾರ್ಗವಾಗಿ ಸಂಚರಿಸುವ ರಕ್ಷಿಕಾ ಹೆಸರಿನ 22 ನಂಬರಿನ ಬಸ್ ಇಂದಿಗೆ ಮೂರು ವರ್ಷವನ್ನು ಪೂರೈಸಿದ್ದು, ಆ ಪ್ರಯುಕ್ತ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಮೂರು ವರುಷ ಪೂರೈಸಿರುವ ಹಿನ್ನೆಲೆಯಲ್ಲಿ ಬಸ್ಸನ್ನು ಬಹಳ ಸುಂದರವಾಗಿ ಅಲಂಕರಿಸಲಾಗಿದ್ದು, ಬಸ್ಸಿನ ಮೇಲೆ ಹ್ಯಾಪ್ಪೀ ಬರ್ತ್ ಡೇ ಎಂದು ಬರೆಯಲಾಗಿದೆ. ಮಾತ್ರವಲ್ಲ ಇಂದು ಬಸ್ಸಿನಲ್ಲಿ ಪ್ರಯಾಣ ಮಾಡಿದ ಎಲ್ಲಾ ಪ್ರಯಾಣಿಕರಿಗೂ ಸಿಹಿತಿಂಡಿ ವಿತರಿಸಿ, ಬಸ್ಸಿನ ನಿರ್ವಾಹಕ ಮತ್ತು ಚಾಲಕ ಖುಷಿಪಟ್ಟಿದ್ದಾರೆ