News

ಬೆಂಗಳೂರು: ಅಡ್ವಾಣಿ ಅವರಿಗೆ ಹುಟ್ಟುಹಬ್ಬದ ಶುಭಕೋರಿ, ಬಿಜೆಪಿಯ ಕಾಲೆಳೆದ ಮಾಜಿ ಸಿಎಂ

ಬೆಂಗಳೂರು, ನ 08(SM): ಬಿಜೆಪಿಯ ಹಿರಿಯ ರಾಜಕಾರಣಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬದ ಶುಭಕೋರಿದ್ದಾರೆ. ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿಜೆಪಿ ಮುಖಂಡರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ಅಡ್ವಾಣಿ ಅವರ ಹಿರಿತನ ಹಾಗೂ ಅನುಭವಕ್ಕೆ ಬಿಜೆಪಿ ಪಕ್ಷದಲ್ಲಿ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆತಂಕದಲ್ಲಿ ಇರುವ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಿಮ್ಮ ಮಾರ್ಗದರ್ಶನ ಅಗತ್ಯವಿದೆ. ಆ ಮೂಲಕ ಪರೋಕ್ಷವಾಗಿ ಬಿಜೆಪಿ ಮುಖಂಡರನ್ನು ಟೀಕಿಸಿದ್ದಾರೆ.

ಅಡ್ವಾಣಿ ಅವರ ಹುಟ್ಟುಹಬ್ಬಕ್ಕೆ ಗಣ್ಯಾತಿ ಗಣ್ಯರು ಶುಭಕೋರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ನಿರ್ಮಾಣದಲ್ಲಿ ಎಲ್.ಕೆ. ಅಡ್ವಾನಿ ಅವರ ಪಾತ್ರ ಪ್ರಮುಖವಾಗಿದೆ. ಅವರ ನಿರ್ಧಾರಗಳು, ನೀತಿಗಳು ಮೆಚ್ಚುಗೆಗೆ ಒಳಪಟ್ಟಿದೆ ಎಂದು ತಿಳಿಸಿದ್ದಾರೆ.