News

ಕಾಸರಗೋಡು: ಶಬರಿಮಲೆ ಉಳಿಸಲು, ಬಿಜೆಪಿಯಿಂದ ರಥಯಾತ್ರೆ

ಕಾಸರಗೋಡು, ನ 08(SM): ಶಬರಿಮಲೆ ದೇಗುಲವನ್ನು ಸಂರಕ್ಷಿಸಬೇಕು, ರಾಜ್ಯ ಸರಕಾರ ಅಯ್ಯಪ್ಪ ವ್ರತಧಾರಿಗಳನ್ನು ಸುಳ್ಳು ಮೊಕದ್ದಮೆಯಲ್ಲಿ ಸಿಲುಕಿಸುವ ಹುನ್ನಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿರುವ ‘ಶಬರಿಮಲೆ ಸಂರಕ್ಷಣಾ ರಥಯಾತ್ರೆ’ಗೆ ಇಂದು ಮಧೂರಿನಲ್ಲಿ ಚಾಲನೆ ನೀಡಲಾಯಿತು.

ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ ಮತ್ತು ತುಷಾರ್ ವೆಳ್ಳಾಪಲ್ಲಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರಥಯಾತ್ರೆಗೆ ಮಧೂರು ಶ್ರೀ ಸಿದ್ದಿವಿನಾಯಕ ದೇವಸ್ಥಾನ ಪರಿಸರದಲ್ಲಿ ಬಿಜೆಪಿಯ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯಸಭಾ ಸದಸ್ಯ ಪಿ.ಮುರಳೀಧರನ್ ಮೊದಲಾದ ಮುಖಂಡರು ಭಾಗವಹಿಸಿದ್ದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಗಲಿರುವ ರಥಯಾತ್ರೆ ನ.13ರಂದು ಪತ್ತನಂತಿಟ್ಟದಲ್ಲಿ ಸಮಾರೋಪಗೊಳ್ಳಲಿದೆ.