News

ರಾತ್ರಿ 8 ಗಂಟೆಗೂ ಮುನ್ನಾ ಪಟಾಕಿ ಹೊಡೆದವರ ವಿರುದ್ದ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು

ನವದೆಹಲಿ, ನ 08 (MSP): ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ, ರಾತ್ರಿ 8 ಗಂಟೆಗೂ ಮುಂಚಿತವಾಗಿ ಪಟಾಕಿ ಸಿಡಿಸಿದವರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೋರ್ಟ್ ತೀರ್ಪನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ದೆಹಲಿ ಪೊಲೀಸರು ಈ ರೀತಿ ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕ್ರಮವಾಗಿ ಪಟಾಕಿ ಮಾರಾಟ ಮಾಡಿದವರು ಹಾಗೂ ರಾತ್ರಿ 8ಕ್ಕೂ ಮೊದಲೇ ಪಟಾಕಿ ಸಿಡಿಸಿದವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸರಿಸುಮಾರು 600 ಕೆ.ಜಿಗೂ ಸುಡುಮದ್ದುಗಳನ್ನು ವಶಪಡಿಸಿಕೊಂಡಿದ್ದು, 100ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ..

ಇದಲ್ಲದೆ ವಾಯುವ್ಯ ದೆಹಲಿಯಲ್ಲಿ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಸುಮಾರು 140 ಕೆ.ಜಿ ಪಟಾಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ 57 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಇದಲ್ಲದೆ ದ್ವಾರಕದಲ್ಲಿ ರಾತ್ರಿ 8ಕ್ಕೂ ಮುಂಚೆ ಪಟಾಕಿ ಸಿಡಿಸಿದವರು ಸೇರಿ 42 ಮಂದಿ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಆಗ್ನೇಯ ದೆಹಲಿ 23 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, 17 ಜನರನ್ನು ಆರೆಸ್ಟ್ ಮಾಡಿದ್ದಾರೆ.