News

ಮಂಗಳೂರು: ರೆಡ್ಡಿ ನಮ್ಮ ಪಕ್ಷದಲಿಲ್ಲ ಎಂದು ಅಂತರ ಕಾಯ್ದುಕೊಂಡ ಬಿಎಸ್‌ವೈ

ಮಂಗಳೂರು, ನ 08 (MSP): ಜನಾರ್ದನ ರೆಡ್ಡಿ ಇ.ಡಿ ಡೀಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ’ನನಗೆ ಈ ವಿಚಾರದಲ್ಲಿ ಏನೂ ತಿಳಿದಿಲ್ಲ’ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಿಎಸ್‌ ಯಡಿಯೂರಪ್ಪ, ಈ ಬಗ್ಗೆ ನನಗೇನು ಏನೂ ತಿಳಿದಿಲ್ಲ. ರೆಡ್ದಿ ತಪ್ಪು ಮಾಡಿದ್ರೆ ಕಾನೂನಿನಲ್ಲಿ ಪ್ರಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೋ, ತೆಗೆದುಕೊಳ್ಳಲಿ. ಇದರ ಬಗ್ಗೆ ನಮಗೇನು ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ, ಜನಾರ್ದನ ರೆಡ್ಡಿ ಈಗ ನಮ್ಮ ಪಕ್ಷದಲ್ಲಿಲ್ಲ. ಹಾಗಾಗಿ ಈ ಬಗ್ಗೆ ಏನೂ ಹೇಳೋದಿಲ್ಲ. ಸೂಕ್ತವಾದ ತನಿಖೆ ನಡೆಸಿ. ತಪ್ಪು ಯಾರು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಏನೇ ಇದ್ದರೂ ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ ಎಂದರು.

ಈ ಬಗ್ಗೆ ನಾನು ಹೆಚ್ಚಿನ ಮಾಹಿತಿ ಪಡೆದಿಲ್ಲ. ಮಾದ್ಯಮದಲ್ಲಿ ನೋಡಿ ಗೊತ್ತಾಗಿದೆ ಅಷ್ಟೆ ಎಂದು ಹೇಳಿದ ಅವರು ಜನಾರ್ಧನ ರೆಡ್ದಿಯಿಂದ ಅಂತರ ಕಾಯ್ದುಕೊಂಡರು.