News

ಉಡುಪಿ: ಗೋ ಪೂಜೆ ನೆರವೇರಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ, ನ 08 (MSP): ದೀಪಾವಳಿ ಸಂಭ್ರಮದಲ್ಲಿ ಕರಾವಳಿಯಲ್ಲಿ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ ಕರುಗಳನ್ನು, ಹಟ್ಟಿಯನ್ನು ಸ್ವಚ್ಚಗೊಳಿಸಿ ಅಲಂಕರಿಸಿ, ಅವುಗಳಿಗೆ ಶಾಸ್ತ್ರೋಕ್ತ ಪೂಜೆಯನ್ನು ಸಲ್ಲಿಸಿ ತಿಂಡಿ ತಿನಿಸುಗಳನ್ನು ನೀಡುವ ಸಂಪ್ರದಾಯವು ಹಿಂದಿನಿಂದಲೂ ನಡೆದು ಬಂದ ಪದ್ದತಿ.

ಆಧುನಿಕ ಹೈನುಗಾರಿಕೆಗೆ ಒತ್ತು ಕೊಟ್ಟಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತನ್ನ ಉಡುಪಿಯ ಮನೆಯಲ್ಲಿ ದೀಪಾವಳಿ ಆಚರಿಸಿಕೊಂಡರು. ದೀಪಾವಳಿಯ ಮೂರನೇ ದಿನವಾದ ಬಲಿಪಾಡ್ಯಮಿಯಂದು ಪುರೋಹಿತರ ಮಾರ್ಗದರ್ಶನದಲ್ಲಿ ನಿವಾಸದಲ್ಲಿರುವ ಹಟ್ಟಿಯಲ್ಲಿ ಸಾಂಪ್ರದಾಯಿಕ ವಿಧಿ ವಿಧಾನದಲ್ಲಿ ಗೋಪೂಜಾ ಸಲ್ಲಿಸಿ ದನ ಕರುಗಳಿಗೆ ಆಹಾರ ತಿನ್ನಿಸಿದರು.