News

ಬೆಂಗಳೂರು: ರಾಘವೇಶ್ವರ ಶ್ರೀಗಳ ವಿರುದ್ಧದ ಬರಹಗಳಿಗೆ ತಡೆ

ಬೆಂಗಳೂರು, ನ 07(SM): ಹೊಸನಗರದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಕೆಲವೊಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡ ಬಳಿಕ ಯಾವುದೇ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವುದನ್ನು ತಡೆಗಟ್ಟಲು ಪ್ರತಿಬಂಧಕಾಜ್ಞೆ ಹೊರಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ಅಂಗೀಕರಿಸಿದೆ.

ಪ್ರಮುಖವಾಗಿ ಈ ಹಿಂದೆ ಶ್ರೀಗಳ ಮಠದಲ್ಲಿದ್ದು, ಸ್ವಾಮೀಜಿಗಳ ನಿಕಟವರ್ತಿಯಾಗಿದ್ದ ಅಭಿರಾಮ್ ಹೆಗ್ಡೆ ಅವರು ಬರೆಯಲು ಮುಂದಾಗಿದ್ದ ಕಾದಂಬರಿಗೆ ತಡೆಯೊಡ್ಡಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ಸ್ವಾಮೀಜಿ ವಿರುದ್ಧ ಏನನ್ನೂ ಬರೆಯದಂತೆ ಸೂಚನೆ ನೀಡಲಾಗಿದೆ.

ರಾಘವೇಶ್ವರ ಸ್ವಾಮೀಜಿಗಳ ಬಗ್ಗೆ ತಾವು ಬರೆಯಲು ಉದ್ದೇಶಿಸಿದ್ದ ಕಾದಂಬರಿಗೆ ಮುನ್ನುಡಿ ಎಂಬಂತೆ ಅಭಿರಾಮ್ ಅವರು ಇತ್ತೀಚೆಗೆ ವೆಬ್ ತಾಣವೊಂದರಲ್ಲಿ ರಾಘವೇಶ್ವರ ಶ್ರೀಗಳ ಬಗ್ಗೆ ಬರೆದಿದ್ದರು. ಇದಾದ ಬಳಿಕ ಈ ಬಗ್ಗೆ ಫೇಸ್ ಬುಕ್ ನಲ್ಲಿ ಚರ್ಚೆ ನಡೆದಿತ್ತು. ಇದೆಲ್ಲವನ್ನು ಗಮನಿಸಿದ ಮಠದವರು, ನ್ಯಾಯಾಲಯಕ್ಕೆ ತೆರಳಿ ಇಂಜೆಂಕ್ಷನ್ ಆರ್ಡರ್ ತರುವಲ್ಲಿ ಯಶಸ್ವಿಯಾಗಿದ್ದಾರೆ.

ರಾಘವೇಶ್ವರ ಭಾರತಿಗಳು ಸುಮಾರು 45 ಮಾಧ್ಯಮಗಳು ಸದರಿ ಪ್ರಕರಣಗಳಲ್ಲಿ ಯಾವುದೇ ಮಾನಹಾನಿ ವರದಿಗಳನ್ನು ಜನರಿಗೆ ಪ್ರಚಾರ ಮಾಡದಂತೆ ನ್ಯಾಯಾಲಯವನ್ನು ಕೋರಿದ್ದರು. ಅದಕ್ಕೆ ನ್ಯಾಯಾಲಯ ಒಪ್ಪಿಗೆಯನ್ನು ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.