News

ಉಡುಪಿ: ಟಿಪ್ಪು ಜಯಂತಿ ಆಚರಿಸಿದರೆ, ಬಿಜೆಪಿಯಿಂದ ಪ್ರತಿಭಟನೆಯ ಎಚ್ಚರಿಕೆ

ಉಡುಪಿ, ನ 07(SM): ರಾಜ್ಯ ಸರಕಾರ, ನವೆಂಬರ್ 10ರಂದು ನಡೆಸುವ ಟಿಪ್ಪು ಜಯಂತಿ ಆಚರಣೆಯಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ರಾಜ್ಯ ಸರಕಾರಕ್ಕೆ ಸಂದೇಶ ನೀಡುವುದಕ್ಕಾಗಿ ನವೆಂಬರ್ 9ರಂದು ನಗರದ ಬಿಜೆಪಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಎಚ್ಚರಿಸಿದ್ದಾರೆ.

ಉಡುಪಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಟ್ಟಾರು ರತ್ನಾಕರ್ ಹೆಗ್ಡೆ, ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅನೇಕ ಪ್ರತಿಭಟನೆಯ ನಡುವೆಯೂ ಟಿಪ್ಪು ಜಯಂತಿಯನ್ನು ಆಚರಿಸಿ ವಿವಾದ ಸೃಷ್ಟಿಸಿತ್ತು.

ಟಿಪ್ಪು ಈ ದೇಶಕ್ಕಾಗಲಿ ರಾಜ್ಯಕ್ಕಾಗಲಿ ಯಾವುದೇ ಕೊಡುಗೆಯನ್ನು ನೀಡಿಲ್ಲ. ತನ್ನ ರಾಜ್ಯದ ವಿಸ್ತರಣೆ ಮಾಡಲು ಬ್ರಿಟಿಷರೊಂದಿಗೆ ಹೋರಾಡಿದ್ದು ಬಿಟ್ಟರೆ, ಬೇರೆ ಯಾವುದೇ ಉದ್ದೇಶ ಆತ ಹೊಂದಿರಲಿಲ್ಲ. ಕರ್ನಾಟಕದಲ್ಲಿ 8000ಕ್ಕಿಂತ ಹೆಚ್ಚು ದೇವಸ್ಥಾನ ಕೆಡವಿದ್ದಾನೆ ಎನ್ನುವುದನ್ನು ಪುರಾವೆ ಹೇಳುತ್ತದೆ. ಇಂತಹ ಮತಾಂಧನನ್ನು ಇನ್ನಷ್ಟು ವೈಭವೀಕರಣ ಮಾಡಬಾರದು ಎಂದು ಆಗ್ರಹಿಸಿದರು.