News

ಫಸ್ಟ್​ನೈಟ್ ದಿನ ವಧು ಕಿಡ್ನಾಪ್.!

ಕೊಪ್ಪಳ,ಅ 11 (MSP):ಅವರಿಬ್ಬರದ್ದು ಸಡಗರ ಸಂಭ್ರಮದಿಂದ ವಿವಾಹ ನಡೆದಿತ್ತು.ಆದರೆ ಇನ್ನೇನು ಫಸ್ಟ್​ನೈಟ್ ಎನ್ನುವ ದಿನವೇ ವಧುವನ್ನು ಅಪಹರಣವಾಗಿದೆ. ಇಂತಹ ವಿಚಿತ್ರ ಘಟನೆ ಗಂಗಾವತಿಯ ಗುಡೂರು ಎಂಬಲ್ಲಿ ನಡೆದಿದೆ. ಗುಡೂರು ಗ್ರಾಮದ ಗಾಯಿತ್ರಿ ಹಾಗೂ ಅದೇ ಗ್ರಾಮದ ಮಲ್ಲನ ಗೌಡ ಅವರ ವಿವಾಹವೂ ಕುಷ್ಟಗಿ ತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ನಡೆದಿತ್ತು. 15 ದಿನಗಳ ಬಳಿಕ ಯುವತಿಯ ತವರು ಮನೆ ಗುಡೂರಿನಲ್ಲಿ ಮೊದಲ ರಾತ್ರಿ ಕಾರ್ಯಕ್ರಮಕ್ಕಾಗಿ ಸಿದ್ದತೆ ನಡೆದಿತ್ತು. ದುರಂತವೆಂದರೆ ವಧು ಶೌಚಾಲಯಕ್ಕೆಂದು ಮನೆಯಿಂದ ಹೊರ ಬಂದ ವೇಳೆ ಹೊಂಚು ಹಾಕಿ ಕುಳಿತಿದ್ದ 6 ಮಂದಿ ವಧುವನ್ನು ಅಪಹರಣ ಮಾಡಿ ಕಾರಿನಲ್ಲಿ ಎಳೆದೊಯ್ದಿದ್ದಾರೆ. ಆಕೆ ಕಿರುಚಿಕೊಂಡಾಗ ಮನೆಯವರು ಧಾವಿಸಿ ಬಿಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.


ಸೋಮನಾಳ ಗ್ರಾಮದ ಅಂಜು ಕುಮಾರ್‌ ರೆಡ್ಡಿ ಎಂಬಾತ ತನ್ನ ಸಹಚರರೊಂದಿಗೆ ಗಾಯತ್ರಿಯನ್ನು ಅಪಹರಣ ಮಾಡಿದ್ದಾನೆ ಎಂದು ಗಾಯತ್ರಿ ಪೋಷಕರು ಕಾರಟಗಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತ ಕಡೆ ವರನ ಕದೆಯವರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.