News

ಪುತ್ತೂರು: ಸಮಾವೇಶದ ಫ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಆಘಾತದಿಂದಎಸ್ ಡಿ ಪಿಐ ಮುಖಂಡ ದುರ್ಮರಣ

ಪುತ್ತೂರು, ಅ 11 (MSP): ಎಸ್ ಡಿ ಪಿಐ ಪಕ್ಷದ ಕಾರ್ಯಕರ್ತರ ಸಮಾವೇಶದ ಫ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಆಘಾತದಿಂದ ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಸ್ಥಳದಲ್ಲೇ ಮೃತಪಟ್ಟ ಘಟನೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಪುತ್ತೂರು ನಗರದ ದರ್ಬೆ ಬಳಿ ಸಂಭವಿಸಿದೆ. ಮೃತರನ್ನು ಕೂರ್ನಡ್ಕ ನಿವಾಸಿ ಹಂಝ ಅಫ್ನಾನ್ (40) ಎಂದು ಗುರುತಿಸಲಾಗಿದೆ. ಶುಕ್ರವಾರದಂದು ಎಸ್ ಡಿ ಪಿಐ ಪಕ್ಷದ ಕಾರ್ಯಕರ್ತರ ಜಾಥಾ ಸಮಾವೇಶವೂ ನಡೆಯುತ್ತಿದ್ದ ಹಿನ್ನಲೆಯಲ್ಲಿ ಪುತ್ತೂರಿನ ದರ್ಬೆ ಪೆಟ್ರೋಲ್ ಬಂಕ್ ಬಳಿ ಕಬ್ಬಿಣದ ಚೌಕಟ್ಟು ಹಾಕಿದ್ದ ಪ್ಲೆಕ್ಸ್ ನ್ನು ಕಟ್ಟುತ್ತಿರುವ ಸಂದರ್ಭ ಈ ಅವಘಡ ಸಂಭವಿಸಿದೆ.

ಮೃತರು ಕೂರ್ನಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.