News

ಮೂಡುಬಿದಿರೆ: ಪೌಲ್ ಗೋವಿಯಸ್ ಹತ್ಯೆ ಪ್ರಕರಣ, ಆರೋಪಿ ಮಗನ ಕೃತ್ಯ ಸಾಬೀತು

ಮೂಡುಬಿದಿರೆ, ಅ 10(SM): ಮೂಡುಬಿದಿರೆ ಹೊಸಬೆಟ್ಟು ಕರಿಂಗಾನ ನಿವಾಸಿ ಪೌಲ್ ಗೋವಿಯಸ್ ಎಂಬವರನ್ನು ಆಸ್ತಿ ವಿಚಾರಕ್ಕೆ ಸಂಬಂಧಿಸಿ ಹತ್ಯೆ ಗೈದ ಪುತ್ರ ಡಾಲ್ಫಿ ಗೋವಿಯಸ್ ಎಂಬವನ ಆರೋಪ ಸಾಬೀತಾಗಿದೆ.



೨೦೧೭ರ ಎಪ್ರಿಲ್ ತಿಂಗಳ ೧೪ರಂದು ಡಾಲ್ಪಿ ಕೃತ್ಯ ಎಸಗಿದ್ದ. ತನ್ನ ತಂದೆಯನ್ನು ಹತ್ಯೆ ಮಾಡಿದ್ದಲ್ಲದೆ ಸಹೋದರನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ ಐ ರಾಮಚಂದ್ರ ನಾಯಕ್ ತನಿಖೆ ಕೈಗೆತ್ತಿಕೊಂಡಿದ್ದರು. ಪ್ರಕರಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿ ನ್ಯಾಯಾಲಯ ವಿಚಾರಣೆ ನಡೆಸಿದ್ದು, ೩೬ ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದೆ. ಸದ್ಯ ಆರೋಪಿಯ ಕೃತ್ಯವನ್ನು ನ್ಯಾಯಾಲಯ ಸಾಬೀತುಪಡಿಸಿದ್ದು, ಶಿಕ್ಷೆ ಕಾಯ್ದಿರಿಸಲಾಗಿದೆ.

ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನಾಯ್ಯಾಧೀಶರಾದ ಕಡ್ಲೂರ್ ಸತ್ಯನಾರಾಯಣಾಚಾರ್ಯ ವಾದವನ್ನು ಆಲಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಸಿಕ್ಯೂಟರ್ ಕೆ.ಪುಷ್ಪರಾಜ್ ಆಡ್ಯಂತಾಯ ವಾದ ಮಂಡಿಸಿದ್ದಾರೆ.