News

ಬೆಳ್ತಂಗಡಿ: ಮೋಜು ಮಾಡಲೆಂದು ತೆರಳಿದ್ದ ಯುವಕ ಬಂದಿದ್ದು ಶವವಾಗಿ

ಬೆಳ್ತಂಗಡಿ, ಸೆ 21(SM): ಗೆಳೆಯರೊಂದಿಗೆ ಕೆರೆಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪೂಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.



ಮೃತ ಯುವಕನನ್ನು ಮಡಂತ್ಯಾರು ಸಮೀಪ ಬಂಗೇರಕಟ್ಟೆ ನಿವಾಸಿ ಸಿರಾಜುದ್ದೀನ್ ಎಂಬವರ ಪುತ್ರ ಇಮ್ರಾನ್(24) ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ಶಿಕ್ಷಣ ಮುಗಿಸಿಕೊಂಡಿರುವ ಇಮ್ರಾನ್, ಗುತ್ತಿಗೆದಾರರಾಗಿರುವ ತನ್ನ ತಂದೆಯೊಂದಿಗೆ ಕೆಲಸ ಮಾಡುತ್ತಿದ್ದರು.

ಶುಕ್ರವಾರ ರಜೆಯಿದ್ದ ಕಾರಣ ಸ್ನೇಹಿತರೊಂದಿದೆ ಈಜಾಡಲು ತೆರಳಿದ್ದ. ಈ ಸಂದರ್ಭ ಆಯ ತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.